ಯುಗದ ಆಹ್ವಾನವಿದು ಕೇಳಬನ್ನಿ

ಯುಗದ ಆಹ್ವಾನವಿದು ಕೇಳಬನ್ನಿ ತಾಯ್ನೆಲದ ಕರೆಗೆ ಓಗೊಡುತ ಬನ್ನಿ       || ಪ || ಹೂಣ ಗ್ರೀಕರ ಗೆಲಿದು ಶಕಕುಶಾನರನುಲಿದು ಆಂಗ್ಲ ಮೋಘಲರ ಹಣಿದ ಹಿರಿಮೆಯಿರಲು ತಡೆಯುವರಾರಿನ್ನು ಬಿಡದೆ ಮುಂದಡಿಯಿಡುತ ವಿಶ್ವ ವಿಜಯಧ್ವಜವ ಮೆರೆಸಬನ್ನಿ       || 1 || ಸಾವಿರದ ಇತಿಹಾಸ ನಿತ್ಯ ಪ್ರೇರಕವಾಗಿ ಎಮ್ಮ ಹಿರಿಯರ ಬಾಳು ದೀಪವಾಗಿ ನವಿರುಗೊಳ್ಳಲಿ ತ್ರಾಣ ಕ್ಷಾತ್ರ ಶಕ್ತಿಯ ಸ್ಫುರಣ ನಾಡರಕ್ಷಾಕವಚ ಆಗಬನ್ನಿ              || 2 || ಆತ್ಮವಿಸ್ಮೃತಿಯೊಂದು ಸ್ವಾರ್ಥ ಚಿಂತನೆಯೊಂದು ರಾಹು ಕೇತು ಗ್ರಹಣ ಮುಕ್ತವಾಗಿ ಬೆಳಗಲಿದೆ ಹಿಂದುತ್ವದಾ ಪ್ರಭೆಯು […]

Read More