ಹುಟ್ಟಿದವರೆಷ್ಟೋ ಯುಗಾದಿಯ ದಿನ

ಹುಟ್ಟಿದವರೆಷ್ಟೋ ಯುಗಾದಿಯ ದಿನ ಹೊಸ ಯುಗಾದಿ ಸೃಷ್ಟಿಸಿದವರೆಷ್ಟು ಜನ? || ಪ || ಹಾಗೂ ಒಬ್ಬರು ಅವರೂ ಅವರನ್ನೂ ಹಡೆದದ್ದು ಯುಗಾದಿ ಹಿಡಿದದ್ದು ಹೊಸ ಹಾದಿ ಪಡೆದದ್ದು ಮುಳ್ಳಿನ ಗಾದಿ ನುಡಿದದ್ದು ನಡೆದದ್ದು ದುಡಿದದ್ದು ದೇಶಕ್ಕೆ ಭದ್ರ ಬುನಾದಿ ಹರಿಸಿದ್ದು ಜೀವನದ ಜೀವನದಿ ಸೇರಿದ್ದು ಯುವಮನದ ನಿಸ್ಸೀಮ ಜಲಧಿ || 1 || ತುರ್ತಿನ ವರ್ತುಲ ಸುತ್ತಿಸುವ ಕಡಲುಗಳ್ಳರ ಬೀಸುಗತ್ತಿಗೆ ಹೆದ್ದೆರೆ ಸಾಯುವುದಿಲ್ಲ ಅವರನ್ನಳಿಸಲು ಕಾಯುವುದಿಲ್ಲ ಅಳಿಸಿ ತಳಕಿಳಿಸಲು ನೋಯುವುದಿಲ್ಲ || 2 || ದಡದಲ್ಲಿ ದೃಢವಾಗಿ […]

Read More

ಅವನ ಸ್ಮೃತಿಗಳು ಕೊನರಿ

ಅವನ ಸ್ಮೃತಿಗಳು ಕೊನರಿ ಕವನ ಕುಸುಮಗಳರಳಿ ಚೈತ್ರ ಚೇತನದೆದುರು ಜಡ ಸಮಾಧಿ ಹಸಿರಾದ ಭಾವಗಳ ಹೊಸ ಬೆಳಕಿನಲಿ ಬೆಳೆಸಿ ದೃಢಗೊಳಿಸ ಬಂತಿದೋ ಹೊಸ ಯುಗಾದಿ ಅವನ ನೆನಪಿಗೆ ಬಂತೊ ಹೊಸ ಯುಗಾದಿ || ಪ || ಭೀಮಕಾಯದ ಸುಮನ ಕೋಮಲ ಕಮನೀಯ ಮೆಚ್ಚುಗೆಯ ಬಿಟ್ಟಿರುವ ಲೋಕ ಕುಣಿಸಿ ಹತ್ತಿರಕೆ ಕರೆದು ನೀನಾರೆಂದು ಏಕೆಂದು ಹೊಚ್ಚ ಹೊಸ ತನು ತೊಡಿಸಿ, ಉಣಿಸಿ, ಮಣಿಸಿ, ಎತ್ತರಕೆ ಬೆಳೆದವನ ನೆನಪಿದೋ ನಾಡಿನಲಿ ಲೋಕ ಕಂಡಿದೆ ಇಲ್ಲಿ ಹೊಸದು ಹಾದಿ || 1 […]

Read More