ಯುದ್ಧಭೂಮಿ ಕರೆದಿದೆ

ಯುದ್ಧಭೂಮಿ ಕರೆದಿದೆ ನಿದ್ದೆ ತೊರೆದು ಎದ್ದು ಬಾ ಘೋರ ಸಂಗ್ರಾಮಕೆ ಸಿದ್ಧನಾಗಿ ಮುಂದೆ ಬಾ ಭರತಮಾತೆಗೆ ಜೈ ಭರತಮಾತೆಗೆ ಶಿರವಬಾಗಿ ಮುನ್ನಡೆ ವಿಶ್ವನಾಥಗೆ || ಪ || ರಣಕಹಳೆಯ ಸಿಂಹನಾದ ಮೊಳಗುತಿರುವುದು ಸಮರಭೇರಿ ಗಡಿಯುದ್ಧಕು ಗುಡುಗುತಿರುವುದು ನಡುಗುತಿಹರು ಅರಿಗಳು ಚದುರುತಿಹುರು ರಿಪುಗಳು ಶತ್ರುಕುಲದ ಹುಟ್ಟನಳಿಸೆ ಮುನ್ನುಗ್ಗು ಬಾ || 1 || ಸಾಕು ಮಾಡು ಬರಿಯ ಶಾಂತಿಮಂತ್ರ ಬೋಧನೆ ಅರಿಯದೇನು ಭಾರತಾಂಬೆಯೊಡಲ ವೇದನೆ ? ಗೈದು ವೀರಘೋಷಣೆ ಅಸ್ತ್ರಶಸ್ತ್ರ ಚಾಲನೆ ದ್ರೋಹಿಗಳಿಗೆ ತಕ್ಕ ಪಾಠವನ್ನು ಕಲಿಸು ಬಾ […]

Read More