ಚಪಲ ಮನವನು ತಣಿಸಿ ಇಂದ್ರಿಯಂಗಳ ಮಣಿಸಿ ಸಂಯಮದ ಸಾಧನೆಯ ಪ್ರಗತಿ ಮಾರ್ಗ ಆತ್ಮ ಸುಖವನು ಬಯಸಿ ಸಂತಸದ ಸೆಲೆಯರಸಿ ಅಂತರಂಗದ ಯಾತ್ರೆಯದುವೆ ಯೋಗ || ಪ || ಸತ್ವಯುತ ಆಹಾರ, ಹಿತ-ವಿಹಿತ ವ್ಯವಹಾರ ಮಿತವಾದ ಉಪಭೋಗ, ವಿಷಯದಾಸಕ್ತಿ ತಿದ್ದಿರುವ ತನುಮನವು ಶುದ್ಧಗೊಳಿಸಿದ ಬುದ್ಧಿ ಆತ್ಮಾನುಸಂಧಾನ ಭಗವದನುರಕ್ತಿ || 1 || ನನ್ನರಿವ ನಾ ಗಳಿಸಿ ಚಿನ್ಮಯನ ಬೆಸಗೊಳುವ ಜನ್ಮ ಸಫಲತೆಯೆಂಬ ದಿವ್ಯ ಯೋಗ ಫಲದ ಬಯಕೆಯು ಇರದ ಕರ್ಮದಲೇ ಸಾರ್ಥಕ್ಯ ಕರ್ಮದಲಿ ಕುಶಲತೆಯ ಕಲೆಯು ಯೋಗ || […]
ಯೋಗ ಮಾಡಿರೋ ಎಲ್ಲರು ಯೋಗವ ಮಾಡಿರೋ ಎಲ್ಲ ಭೋಗವ ಬದಿಗೆ ಇಟ್ಟು, ಆರೋಗ್ಯವಂತರಾಗಲು ಇಂದು|| ಪ || ರೋಗ-ರುಜಿನವಾ ದೂರವಿರಿಸಲು, ಪ್ರತಿದಿನ ಹರುಷದಿ ಬದುಕಲು ನೀವು ಋಷಿ ಪುಂಗವರ ನೆನೆಯುತ ನೀವು, ಸಾಧಕರಾಗಿ ಬೆಳೆಯಲು ಎಲ್ಲರು ||ಯೋಗ..|| ಸೂರ್ಯನಮಸ್ಕಾರ ಮಾಡಲು ದಿನವೂ, ಸಂಪೂರ್ಣ ಫಲವ ಪಡೆವಿರಿ ನೀವು| ಪ್ರಾಣಾಯಾಮವ ಮಾಡಲು ನಿಮಗೆ, ನೂರು ವರುಷದ ಆಯುಷ್ಯವಿಹುದು ||ಯೋಗ ..|| ವಜ್ರಕಾಯವ ಗಳಿಸಲು ನೀವು ವಜ್ರಾಸನವ ಮಾಡಿಯೇ ನೋಡಿ ಚುರುಕುತನದ ಬುದ್ಧಿಗಾಗಿ, ಶೀರ್ಷಾಸನವ ಮಾಡಿಯೇ ನೋಡಿ||ಯೋಗ..|| ಅರ್ಧ ತಾಸಿನ […]
ಯೋಗದ ಬೆಳಕಲಿ ಸಾಗೋಣ ಸುಯೋಗಿಗಳಾಗಿ ಬದುಕೋಣ ಯೋಗಾಚಾರ್ಯರ ಸ್ತುತಿಸೋಣ ಪತಂಜಲಿ ಮುನಿಗಳ ನಮಿಸೋಣ || ಪ || ಅಷ್ಟಾಂಗ ಯೋಗದ ಆಲದ ಮರದಡಿ ಅಷ್ಟಮದಗಳ ತ್ಯಜಿಸುತಲಿ ಅನುದಿನ ಯಮ-ನಿಯಮಗಳೊಡಗೂಡಿ ರಾಷ್ಟ್ರದ ಧ್ಯಾನವ ಮಾಡೋಣ || 1 || ನರನಾಡಿಗಳೆಲ್ಲವ ತುಂಬಿಹ ಉಸಿರಿಗೆ ನವ ಚೈತನ್ಯವ ನೀಡುತಲೀ ತನು-ಮನ-ಪ್ರಾಣಗಳೆಲ್ಲವ ನಾವು ಭಾರತ ಮಾತೆಗೆ ನೀಡೋಣ || 2 || ಯೋಗದ ದಿನವಿದು ಸಂಕೇತ ಎನ್ನುತ ಜಗದಗಲವು ಹಣತೆಯ ಹಚ್ಚೋಣ ಅರಿವಿನ ಪ್ರತ್ಯಾಹಾರದ ಜೊತೆಯಲಿ ನಾಡಿನ ಕೀರ್ತಿಯ ಮೆರೆಸೋಣ || […]
ಯೋಗವೇ ಜೀವನ… ಸಹಯೋಗವೆ… ಸಹಜೀವನ ಅಂಬರದಾಚೆ, ಸಾಗರದಾಚೆ ಬೆಳಗುತಿದೆ ಯೋಗವು, ಮನೆಮನೆಯಲ್ಲೂ, ಮನಮನದಲ್ಲೂ ಅರಳಲಿದೆ ಯೋಗವು ವ್ಯಕ್ತಿಯ ಬದುಕಿನ ಕಣಕಣಗಳಿಗೂ ವ್ಯಾಪಿಸಲಿದೆ ಯೋಗವು ಜೀವನವೆಂದರೆ ಯೋಗ… ಭಾವನೆಗಳಿಗೆ ಸಂಯೋಗ… || ಪ || ನುಡಿದಂತೆ ನಡೆಯುವ ಜೀವನ ಯೋಗ ಸತ್ಯ ಅಹಿಂಸೆಯ ಪಾಲನೆ ಯೋಗ, ಮನಸ್ಸೆಲ್ಲ ನಿರ್ಮಲ ಹೃದಯ ನಿಷ್ಕಲ್ಮಶ ಸಂಸ್ಕಾರ, ಸಂಯಮ, ಅದುವೆ ಯೋಗ || 1 || ಜಗಕ್ಕೆಲ್ಲ ಬೆಳಕೀವ ಸೂರ್ಯನಿಗೆ ನಮನ ಮಂತ್ರಗಳಾ ಯೋಗ ಸಮ್ಮಿಲನ ಶರೀರಕೆ ವ್ಯಾಯಾಮ ಜೊತೆಗೆ ಪ್ರಾಣಾಯಾಮ ನಿರ್ಮೋಹಿ, […]
ವೇದದ್ರಷ್ಟ್ಯಸಮಾರಮ್ಭಾಂ ಪತಂಜಲಿಸುಮಧ್ಯಮಾಮ್ | ಅಸ್ಮದಾಚಾರ್ಯಪರ್ಯಂತಾಂ ವಂದೇ ಗುರುಪರಂಪರಾಮ್ || ವೇದಗಳ ದ್ರಷ್ಟ್ಯಗಳೆಂದು ಪ್ರಸಿದ್ಧರಾದ ಮಹರ್ಷಿಗಳಿಂದ ಆರಂಭಗೊಂಡು, ಆಚಾರ್ಯರವರೆಗೆ ಬಂದಿರುವ ಗುರುಪರಂಪರೆಯನ್ನು ವಂದಿಸುತ್ತೇನೆ. ಭೂಯಾದ್ ಭವ್ಯಂ ಮಂಗಲಮಾಧ್ಯಾತ್ಮಿಕೇನ ಯೋಗೇನ | ದೇಯಾದ್ ಯೋಗಿಜನೋ ಜನತಾಯೈ ಪರಮಾನಂದಂ ಯೋಗೇನ || ಭೂಮಿಯಲ್ಲಿ ಉತ್ಕೃಷ್ಟವಾದ ಮಂಗಳವು ಆಧ್ಯಾತ್ಮಿಕವಾದ ಯೋಗದಿಂದಾಗಿ ಉಂಟಾಗಲಿ. ಯೋಗಿಗಳು ಉನ್ನತವಾದ ಆನಂದವನ್ನು ತಮ್ಮ ಯೋಗದಿಂದ ಜನತೆಗೆ ನೀಡಲಿ. ಜ್ಞಾನಂ ಭಕ್ತಿಂ ಕರ್ಮ ಪ್ರಾಪ್ಯ ಶ್ರೇಯೋವಂತೋ ರಾಜಂತಾಮ್ | ಆಶ್ರಿತಸುರಾಜಯೋಗಾ ಧ್ಯಾನೇ ಮಗ್ನಾ ಲೋಕೇ ಭ್ರಾಜಂತಾಮ್ || ಜ್ಞಾನ ಭಕ್ತಿ […]
ದೇಹವೆ ದೇಗುಲ ಆತ್ಮನೆ ದೇವರು ಆಸನವೇ ಆರಾಧನೆಯು ಈ ಅನುಬಂಧದ ಆಧಾರದಲಿ ಅರಳಲಿ ನಿನ್ನಯ ಸಾಧನೆಯು ಅಳಿಯಲಿ ಅಸುರೀ ಭಾವನೆಯು || ಪ || ಅಮೃತಪುತ್ರನು ಸುಮನಸಮಿತ್ರನು ಪರಮಪವಿತ್ರನು ನೀನಯ್ಯಾ ಮೇಲೇಳೈ ಕೀಳರಿಮೆಯ ತ್ಯಜಿಸಿ ಕಾದಿದೆ ಉಜ್ವಲ ಭವಿತವ್ಯ || 1 || ದುಡಿದರು ದಣಿಯದ ತಡೆದರು ತಣಿಯದ ಮಡಿದರು ಮಣಿಯದ ಭೀಮಬಲ ಅಡಗಿದೆ ನಿನ್ನೊಡಲಿನ ಕಣಕಣದಲಿ ನೀ ಮೃತ್ಯುಂಜಯ ಆತ್ಮನೆಲಾ || 2 || ಕಾಯವ ನೋಯಿಸಿ ಬೆವರನು ಹಾಯಿಸಿ ಬಾಳಿನ ಸಸಿಯನು ಬೆಳೆಸಯ್ಯಾ ಜಡತೆಯ […]