ವರ್ಧಿಸಲಿ ವೇಗದಲಿ ಭರತಭೂವಲಯದಾರಾಧನೆ ಯಶಭರಿತ ಧ್ಯೇಯರತ ಶತಕೃತ ಮಹಾಪ್ರಲಯಸಾಧನೆ || ಪ || ದೀರ್ಘ ಕಾಳಿಮೆ ಕಳೆದು ಧ್ಯೇಯಭಾಸ್ಕರನೊಲಿದು ಸಾಧಕರದೀ ಯಾತ್ರೆ ಫಲಿಸುವನಕ ಬಲಿದಾನ ಬಲದಾನ ಜ್ಞಾನಗಳ ಬಸಿರಿಂದ ರಾಷ್ಟ್ರರವಿ ಪುನರುದಿಸಿ ಬರುವ ತನಕ || 1 || ದೇಶ ಧರ್ಮದ ಧ್ವಜದ ಸನ್ಮಾರ್ಗದರ್ಶನದ ಪ್ರಭೆಯ ಸ್ವೀಕರಿಸಿ ಸೌಭಾಗ್ಯ ತರಲು ಖಳದನುಜ ರಾಜ್ಯದಲಿ ಅರುಣಜಲದಾಜ್ಯದಲಿ ಧ್ಯೇಯದೀಪವನಿರಿಸಿ ಉರಿಸುತಿರಲು || 2 || ಹೃದಯ ಹೃದಯದ ಬಿಂದು ಒಂದಾಗುತೈತಂದು ಪ್ರಬಲ ಸಿಂಧೂ ರೂಪ ಧರಿಸುವಂತೆ ಶಸ್ತ್ರಾಸ್ತ್ರ ಸ್ಪರ್ಧೆಯಲಿ ನಿಯತಿಯಾಣತಿ […]