ಭಾರತಾವನಿ ನಿನ್ನ

ಭಾರತಾವನಿ ನಿನ್ನ ಆಶ್ರುಧಾರೆಗೆ ತೊಯ್ದು ತೆರೆಯಿತೆ ಪರಶಿವನ ಹೃದಯದ್ವಾರ ಶಿಶು ರೂಪವನು ತಳೆದು ನಿನ್ನ ಮಡಿಲಲಿ ಬೆಳೆದು ಹರಿಸಿದನೆ ಜಗದೆಡೆಗೆ ಪ್ರೇಮ ಪೂರ || ಪ || ನವಯುಗದ ದೃಷ್ಟಾರ ಯುವ ಮನದ ನೇತಾರ ವಿವೇಕದಲಿ ಆನಂದ ಕಂಡ ಸಂತ ಪತಿತ ಶೋಷಿತ ಮನಕೆ ಬಳಲಿ ಬಾಗಿದ ಜನಕೆ ಬೆನ್ನೆಲುಬು ತಾನಾಗಿ ಸೆಟೆದು ನಿಂತ || 1 || ಅಂಗನೆಯರಾಹ್ವಾನ ಅಂದಣದ ಬಹುಮಾನ ಒಂದಿನಿತು ಕುಂದಿಸದ ಧವಳ ಶೀಲ ಜ್ಞಾನ ತೇಜೋಮಯದ ತೆರೆದ ಕಂಗಳಕಾಂತಿ ಫಾಲನೇತ್ರನ ಕರದಿ […]

Read More

ಶ್ರೀ ವಿವೇಕಾನಂದ ಗುರುವರ (ಕುವೆಂಪು)

ಶ್ರೀ ವಿವೇಕಾನಂದ ಗುರುವರ, ನವಯುಗಾಚಾರ್ಯ, ರಾಮಕೃಷ್ಣರ ಭೀಮಶಿಷ್ಯನೆ, ವೀರ ವೇದಾಂತಿ, ಭಾರತಾಂಬೆಯ ಧೀರಪುತ್ರನೆ, ಸಾಧು ಭೈರವನೆ, ಸ್ಥೈರ್ಯದಚಲವೆ, ಧೈರ್ಯದಂಬುಧಿ, ಜಯತು! ಜಯ ಜಯತು! || ಪ || ಮೊರೆದು ಗರ್ಜಿಪ ಕಡಲ ವಾಣಿಯು ನಿನ್ನ ವರವಾಣಿ, ಕಾರಮಿಂಚನು ನಗುವ ತೇಜವು ನಿನ್ನ ಮೈ ಕಾಂತಿ, ಆಳವಂಬುಧಿಯಾಳ ಮೇರೆಯೆ ನಭದ ವಿಸ್ತಾರ ಮಂದರಾದ್ರಿಯ ಮೀರಿದಚಲನು ನೀನು, ಯೋಗೀಂದ್ರ ! || 1 || ನಿನ್ನ ಹೆಸರದೆ ಶಕ್ತಿಯೀಯುವ ದಿವ್ಯತರ ಮಂತ್ರ ನಿನ್ನ ಮಾರ್ಗವೆ ಮುಕ್ತಿದಾಯಕವಾದ ವರಮಾರ್ಗ ನಮ್ಮ ಹೃದಯಕೆ […]

Read More

ಯುಗದ ನಿರೀಕ್ಷೆಯ ಬಸಿರಿಂದ

ಯುಗದ ನಿರೀಕ್ಷೆಯ ಬಸಿರಿಂದ, ಉದಿಸುತ ತಪಸಿನ ಬಲದಿಂದ ಜಗದಲಿ ಧರ್ಮಧ್ವಜವನು ಮೆರೆಸಿದೆ ಹಿಂದುತ್ವದ ಹುಂಕೃತಿಯಿಂದ ಯುಗಪುರುಷ ವಿವೇಕಾನಂದ… ಯುಗಪುರುಷ ವಿವೇಕಾನಂದ… ಯುಗಪುರುಷ ವಿವೇಕಾನಂದ    || ಪ || ಸಂಘಟನೆಯೆ ನಾಡಿನ ಶಕ್ತಿ, ವಿಶ್ವದ ಹಿತದಲೆ ನಿಜಮುಕ್ತಿ ತೊರೆಯಿರಿ ಭಯವ! ಬಲಮುಪಾಸ್ವ! ಭಾರತಮಾತೆಯೆ ಪರದೈವ ದರಿದ್ರನಾರಾಯಣೋಭವ ! ಇದೆ ಆಧ್ಯಾತ್ಮದ ತಿರುಳೆಂದ – ಯುಗಪುರುಷ ವಿವೇಕಾನಂದ        || 1 || ಗಿರಿವನ ಗ್ರಾಮವ ಮುಟ್ಟುತಲಿ, ಮನೆ-ಮನಗಳ ಕದ ತಟ್ಟುತಲಿ ಭರತಕುಲವ ಬಂಧುತ್ವದಿ ಬೆಸೆಯುತ ಹೊಸನಾಡೊಂದನು ಕಟ್ಟುವೆವು ಮರಳಿ […]

Read More