ಯುಗದ ನಿರೀಕ್ಷೆಯ ಬಸಿರಿಂದ, ಉದಿಸುತ ತಪಸಿನ ಬಲದಿಂದ ಜಗದಲಿ ಧರ್ಮಧ್ವಜವನು ಮೆರೆಸಿದೆ ಹಿಂದುತ್ವದ ಹುಂಕೃತಿಯಿಂದ ಯುಗಪುರುಷ ವಿವೇಕಾನಂದ… ಯುಗಪುರುಷ ವಿವೇಕಾನಂದ… ಯುಗಪುರುಷ ವಿವೇಕಾನಂದ || ಪ || ಸಂಘಟನೆಯೆ ನಾಡಿನ ಶಕ್ತಿ, ವಿಶ್ವದ ಹಿತದಲೆ ನಿಜಮುಕ್ತಿ ತೊರೆಯಿರಿ ಭಯವ! ಬಲಮುಪಾಸ್ವ! ಭಾರತಮಾತೆಯೆ ಪರದೈವ ದರಿದ್ರನಾರಾಯಣೋಭವ ! ಇದೆ ಆಧ್ಯಾತ್ಮದ ತಿರುಳೆಂದ – ಯುಗಪುರುಷ ವಿವೇಕಾನಂದ || 1 || ಗಿರಿವನ ಗ್ರಾಮವ ಮುಟ್ಟುತಲಿ, ಮನೆ-ಮನಗಳ ಕದ ತಟ್ಟುತಲಿ ಭರತಕುಲವ ಬಂಧುತ್ವದಿ ಬೆಸೆಯುತ ಹೊಸನಾಡೊಂದನು ಕಟ್ಟುವೆವು ಮರಳಿ […]