ವಿಶ್ವಸಂತತಿ ಎಲ್ಲ ನಿನ್ನ

ವಿಶ್ವಸಂತತಿ ಎಲ್ಲ ನಿನ್ನ ಪುಣ್ಯೋದರದ ಹಸುಗೂಸುಗಳು ಎಂದು ಹಾಲುಣಿಸಿದೆ ಒಂದೇ ತೊಟ್ಟಿಲೊಳಿಟ್ಟು ತೂಗಿ ಶೋಭನವಾಗಿ ಪ್ರೇಮ ಸಂಗೀತದೊಳು ಮೈಮರೆಸಿದೆ || ಪ || ಸೂರ್ಯಚಂದ್ರರಿಗೆಲ್ಲ ಪ್ರಭೆಯನಿತು ಇರಲಿಲ್ಲ ನಿನ್ನ ಕೀರ್ತಿಯ ಜ್ಯೋತಿ ಪ್ರಜ್ವಲಿಸಿತು ಮೇಘಮಂಡಲವೇರಿ ವಿಜಯ ವೀರಧ್ವಜವು ಸ್ವಾತಂತ್ರ್ಯ ಸಂಭ್ರಮದಿ ಸಂಚರಿಸಿತು || 1 || ಅಪಮಾನಗಳನಿಂತು ಶತಮಾನ ಸಹಿಸಿರಲು ಶಕ್ತಿ ಭೈರವಿ ಜನನಿ ತಾಳ್ಮೆಯುಂಟೆ? ಕ್ಷಮೆಯ ಮೀರದೆ ನೋವು ಶಕ್ತಿಪುತ್ರರು ನಾವು ಹರಸಿಬಿಡು ತೆರಳುವೆವು ತಡೆವರುಂಟೆ? || 2 || ಒಮ್ಮತದ ಏಕಪಂಥವ ಹಿಡಿದು ಸಾಗುವೆವು […]

Read More