ವಿಶ್ವಕೆ ಹೊಸತನ ನೀಡಿದ ಮಣ್ಣಲಿ

ವಿಶ್ವಕೆ ಹೊಸತನ ನೀಡಿದ ಮಣ್ಣಲಿ ಜನಿಸಿದ ನಾವೇ ಧನ್ಯ ಉಳಿಯಲಿ ಬೆಳೆಯಲಿ ಅನುದಿನ ನಲಿಯಲಿ ನವ ಉನ್ಮೇಷದ ತಾರುಣ್ಯ || ಪ || ಹದಿಹರೆಯದ ಬಿಸಿನೆತ್ತರ ಹರಿವಲಿ ಪುಟಿದೇಳಲಿ ಯುವ ಚೈತನ್ಯ ಮೈಮನಗಳ ಕೊಳೆ ಕೊಡವುತ ಕೊಡವುತ ಹೊರಹೊಮ್ಮಲಿ ಚಿರ ಜಾಗರಣ ಮುಗಿಲೆತ್ತರ ಬಾನೆತ್ತರ ಏರಲಿ ಭಾವೋನ್ಮೇಷದ ಸ್ಪುರಣಾ……|| 1 || ಉಕ್ಕುತ ಹರಿಯುವ ಜ್ಞಾನದ ತೊರೆಯಲಿ ಈಜಾಡುವ ಹುರುಪಿನಲಿ ರೋಷದಿ ಕ್ಲೇಶದಿ ಸಾಧನೆಯಿರದು ಧ್ಯೇಯದ ಕಡೆ ಗುರಿಯಿರಲಿ ಸೃಜನಾತ್ಮಕ ರಚನಾತ್ಮಕ ಕಾರ್ಯಕೆ ಮನದಲಿ ಶತ ಶ್ರಮವಿರಲಿ […]

Read More

ವಿಶ್ವಕೆ ಭಾರತವಿತ್ತ ಕೊಡುಗೆಯು

ವಿಶ್ವಕೆ ಭಾರತವಿತ್ತ ಕೊಡುಗೆಯು ಮಾನವ ಮಾಧವನಾಗುವ ಬಗೆಯು ಅನುಪಮ ಯೋಗ ಪ್ರಯೋಗ ಅಮರತ್ವದ ಸಹಯೋಗ || ಪ || ಚಿತ್ತದ ಚಂಚಲತೆಗೆ ಕಡಿವಾಣ ಸಾರ್ಥಕ ಬದುಕಿಗೆ ಇದು ಸೋಪಾನ ಹೊಮ್ಮಿಸಿ ನವಚೈತನ್ಯದ ಹೊನಲು ಅಕ್ಷಯ ಆತ್ಮಾನಂದದ ಮಜಲು || 1 || ಹೊರನೋಟಕೆ ಇದು ಬರಿ ವ್ಯಾಯಾಮ ಆಳದಿ ಅದ್ಭುತಶಕ್ತಿಯ ಧಾಮ ತನುಮನಗಳ ಸ್ವಾಸ್ಥ್ಯಕೆ ಸಹಕಾರಿ ಆಧ್ಯಾತ್ಮದ ಸಿದ್ಧಿಯ ರಹದಾರಿ || 2 || ಅಷ್ಟಾಂಗದ ಅಲುಗದ ಅಡಿಪಾಯ ಉತ್ತುಂಗದ ಸಾಧನೆಯ ಉಪಾಯ ಯೋಗದ ಪ್ರಭೆ ಚಿರಕಾಲ […]

Read More