ದೇಶ ಪ್ರೇಮದ ವೀರಘೋಷಣೆ ಮೊಳಗಲಿ

ದೇಶ ಪ್ರೇಮದ ವೀರಘೋಷಣೆ ಮೊಳಗಲಿ ನಾಡಿನೊಡಲಿನ ಸುಪ್ತ ಶಕ್ತಿ ಮಿನುಗಲಿ ಹೊಮ್ಮಲಿ ಹೊರಹೊಮ್ಮತಾ ಚಿಮ್ಮಲು ಬಾನೆತ್ತರ ಸಂಘೋದ್ಘೋಷ ಮನದಲಿ ಸಂಘೋದ್ಘೋಷ || ಪ || ಕರ್ಮಸಾಧನೆಗೈವ ಹಿಂದು, ಮುಂದೆ ಮುಂದೆ ಸಾಗಲಿ ಶ್ರೇಷ್ಠವೃತವ ಮನದಲಿರಿಸಿ ದುಷ್ಟಶಕ್ತಿಯ ಮೆಟ್ಟಲಿ ರುಧಿರವೆಲ್ಲ ಯಜ್ಞದಲ್ಲಿ ಉರಿದು ಉರಿದು ಹೋಗಲು ಸಂಘೋದ್ಘೋಷ ಬದುಕಲಿ ಸಂಘೋದ್ಘೋಷ || 1 || ಸ್ವಾರ್ಥ ಬದುಕಿನ ಬವಣೆ ನೀಗುತ, ರಾಷ್ಟ್ರ ಭಾವನೆ ಗಳಿಸುತಾ ಹೆಜ್ಜೆ-ಹೆಜ್ಜೆಗೂ ಸೇವೆಗೈಯುತಾ, ಶತ್ರು ಹೃದಯವೆ ಗೆಲ್ಲುತಾ ಶಕ್ತಿಯೆಲ್ಲಾ ರಾಷ್ಟ್ರಕಾರ್ಯಕೆ ಸರ್ವರರ್ಪಣೆಯಾಗಲು ಸಂಘೋದ್ಘೋಷ ಹೃದಯದಿ […]

Read More

ಪಾವನೆ ವೀರಶಿವಾಜಿಯ ಮಹತಾಯಿ

ಪಾವನೆ ವೀರ ಶಿವಾಜಿಯ ಮಹತಾಯಿ ವಂದನೆ ಸಲಿಪೆವು ಓ ಜೀಜಾಬಾಯಿ || ಪ || ತಾಯ್ನೆಲ ಮ್ಲೇಚ್ಛರ ಹಾವಳಿಗೀಡಾಗಿ ದಾಸ್ಯದ ಕತ್ತಲೆ ಹಬ್ಬಿರೆ ನೀ ಮರುಗಿ ಸ್ವಾರ್ಥವ ಬಯಸದೆ ಜನಹಿತ ಚಿಂತಿಸಿದೆ ಕಡುಗಲಿ ಪುತ್ರನ ಜನ್ಮಕೆ ಪ್ರಾರ್ಥಿಸಿದೆ || 1 || ಮಿಡಿಯಿತು ಸ್ವದೇಶಪ್ರೇಮವು ಎದೆಯೊಳಗೆ ಕರುಳಿನ ಕುಡಿ ಚಿಗುರೊಡೆಯಿತು ನಿನ್ನೊಳಗೆ ನವರವಿ ಉದಿಸಿದ ಕಾರ್ಗತ್ತಲ ಸೀಳಿ ಧೈರ್ಯ ಪರಾಕ್ರಮ ಬಂದೊಲು ಮೈತಾಳಿ || 2 || ರಾಮನ ಶ್ಯಾಮನ ಕಥೆಗಳ ವರ್ಣಿಸಿದೆ ಸುತನಿಗೆ ಭೀಮಾರ್ಜುನರನು ನೆನಪಿಸಿದೆ […]

Read More

ಭರತವೀರ ಬಾಲರೇ ವೈರಿ ಘನ ಸಮೀರರೆ

ಭರತ ವೀರ ಬಾಲರೇ ವೈರಿ ಘನ ಸಮೀರರೆ ಏಳಿರೇಳಿರೇಳಿರೈ ಭರತಕೀರ್ತಿ ರನ್ನರೇ || ಪ || ಹರಪ್ರಿಯಾ ಕುಮಾರರೆ ಸುರಚಮೂಪ ಧೀರರೆ ಸುರಸುಜನ ಸುರಕ್ಷಸ್ಕಂದ ತಾರಕಾಂಧ ಸೂರ್ಯರೆ || 1 || ಸದಭಿಮಾನ ಶೂರರೆ ಸದಭಿಮನ್ಯು ವೀರರೆ ಗೆಲುವ ಪಣದಿ ಜೀವವಿಡುವ ಕುರುಚಮೂ ಕೃತಾಂತರೆ || 2 || ಗುರುಗೋವಿಂದ ಪುತ್ರರೆ ಪರಮತ್ಯಾಗ ಜೀವರೆ ಹುಗಿದ ಗೋಡೆಯೊಳಗೆ ನಿಂತ ಧರಮ ಕಾಪಿನಮರರೆ || 3 || ರಾಷ್ಟ್ರಹಿತಕೆ ದುಡಿಯಿರೋ ಅಸ್ತ್ರಶಸ್ತ್ರವೆತ್ತಿರೊ ಶತೃವಾರೆ ಬರಲಿ ಕರೆದು ಶಸ್ತ್ರದೂಟ ಬಡಿಸಿರೊ […]

Read More

ವೀರ ಘೋಷಣೆ ವೀರಘರ್ಜನೆ

ವೀರ ಘೋಷಣೆ ವೀರಘರ್ಜನೆ ಗೈಯ್ಯೆ ವಿಜಯೋಪಾಸನೆ ಶಕ್ತಿ ಇಲ್ಲದೆ ಮುಕ್ತಿಯಿಲ್ಲವು ಇದು ಚರಿತ್ರೆಯ ಬೋಧನೆ || ಪ || ಒಬ್ಬರಾಗುತ ಒಬ್ಬದೇವರು ಹುಟ್ಟಿ ಬಂದರು ಬಂದರು ಸಾಧುಪುರುಷರು ವೀರಪುರುಷರು ಬಂದು ಹೋದರು ಹೋದರು ಗೊಡ್ಡು ಮನದಲಿ ಅಡ್ಡಬಿದ್ದೆವು ನಮ್ಮಡಿಯ ಹಿಂದಿಟ್ಟೆವು ಹೂವುಹಣ್ಣನು ಕೊಟ್ಟು ಅವರನು ಮುಂದೆ ಸಾಗಿಸಿ ಬಿಟ್ಟೆವು || 1 || ಉದ್ಧರೇದಾತ್ಮನಾತ್ಮಾನಮ್ ನಾವೇ ಪಠಿಸಿದುದಲ್ಲವೇ? ಕೋವಿ ಕತ್ತಿಯನಿಟ್ಟು ಸುಮ್ಮನೆ ನಾವೆ ಪೂಜಿಸಲಿಲ್ಲವೇ? ಪೂಜೆ ಏತಕೆ ಪಠನವೇತಕೆ ಗೈದೆವೆಂಬುದ ಬಲ್ಲೆವೇ? ಶಸ್ತ್ರವೇತಕೆ ಶಾಸ್ತ್ರವೇತಕೆ ಎಂಬುದನು ಮರೆತಿಲ್ಲವೇ? […]

Read More

ಎದ್ದು ನಿಲ್ಲು ವೀರ

ಎದ್ದು ನಿಲ್ಲು ವೀರ, ದೇಶ ಕರೆದಿದೆ ಪಡೆಯ ಕಟ್ಟು ಧೀರ, ಸಮರ ಕಾದಿದೆ ರಣ ಕಹಳೆಯ ಹೂಂಕಾರದ ಸದ್ದು ಮೊರೆದಿದೆ ರಕ್ತಸಿಕ್ತ ಬಲಿಪೀಠದ ದೃಶ್ಯ ಮೆರೆದಿದೆ                             || ಪ || ಗಡಚಿಕ್ಕುವ ಆಕ್ರಂದನ ನರಳಾಟ ಚೀರಾಟ ಕಿವಿಗೊಡದಿರು ಎದೆಗೆಡದಿರು ನುಗ್ಗುತಲಿ ಮುಂದಕೆ ದೇಹ ಬಿದ್ದು ಹೆಣಗಳುರುಳಿ ರಕ್ತದಾಟದೋಕುಳಿ ಹೋರುವ ಛಲ ಕುಗ್ಗದಿರಲಿ ಧೈರ್ಯ ಮೇರು ಪರ್ವತ || 1 […]

Read More