ಸ್ವರ್ಗಕಿಂತ ಮೇಲು ಜನನಿ ಜನ್ಮಭೂಮಿ ಭಾರತ ವರದೆ ಕಾಯೆ ತಾಯೆ ಇರಲಿ ಒಲವು ರಕ್ಷೆ ಶಾಶ್ವತ || ಪ || ಏರಿ ನಿಂತ ಮೇರು ಗಿರಿಯ ಪಡೆಯು ಗಿರಿಯ ಕಾಯಲು ಮೀರಿ ಮೊರೆವ ಕಡಲು ಮಣಿದು ನಿಂದು ಪಾದ ತೊಳೆಯಲು ಮೆರೆದ ಹಸಿರು ನರ್ತನ – ಮೆರೆಯೆ ದಿವ್ಯದರ್ಶನ || 1 || ಪುಣ್ಯಜಲವ ಹೀರಿ ಫಲವ ನೀಡಿ ನೆಲವು ಪಾವನ ವರ್ಷಧಾರೆ ಸುರಿದು ಬೆಳೆದು ಮಧುರ ಗಂಧ ಕಾನನ ಕುಣಿವ ಝರಿಯ ವೈಖರಿ – ಕಾಣ […]