ಭಾರತಾಂಬೆಯ ವೀರಕುವರರೆ (ವಂಶಿ ರಚನಾ ಶಿವರಂಜನಿ)

ಭಾರತಾಂಬೆಯ ವೀರಕುವರರೆ ಏಳಿ ಎದ್ದೇಳಿ ನಾಡದೇವಿಯ ತೇರನೆಳೆಯಲು ಸ್ವಾಭಿಮಾನದಲಿ ॥ ಒಗ್ಗೂಡಿ ಒಂದಾಗಿ ಸಾಗೋಣ ಚೆಂದಾಗಿ ಹಿಗ್ಗುತ್ತ ಮುಂದಾಗಿ ನಾವೆಂದಿಗೂ ॥ ಸೋಲು ಗೆಲುವು ನೋವು ನಲಿವು ಒಂದೇ ಭಾವದಿ ಸ್ವೀಕರಿಸಿ ॥ ಅಂತಿಮ ವಿಜಯದ ಸಾಧನೆಗಾಗಿ ಸಂಕಲ್ಪವ ಧರಿಸಿ ॥ (ಪ್ರಾಂತ ಘೋಷ್ ಶಿಬಿರದ ಶಿಬಿರ ಗೀತೆ)

Read More

ಸರಿದರೇನು ತೆರೆಯ ಮರೆಗೆ

ಸರಿದರೇನು ತೆರೆಯ ಮರೆಗೆ ನಿನ್ನ ಮರೆಯಲಾರೆವು ನೀನು ತೋರಿದಂಥ ಪಥವ ಎಂದೂ ತೊರೆಯಲಾರೆವು ಮಧುರ ಸ್ವರದ ವಾದಕ .. ನಮನ ಅಮರ ಸಾಧಕ || ಪ || ಶತ ಸಹಸ್ರ ವಂಶಿಯಿಂದ ಮೊಳಗಿ ವೀರ ಸುಸ್ವರ ಹೊಳೆವ ಶಂಖದೊಡಲಿನಿಂದ ದಿವ್ಯನಾದ ಸುಮಧುರ ಅರಿಗಳೆದೆಯ ನಡುಗಿಸಿದ್ದೆ ಗುಡುಗಿ ಪಣವ ರೂಪದಿ ಆನಕಗಳ ರಣರಣನದಿ ಝಲ್ಲರಿಗಳ ತಾಳದಿ || 1 || ಸಂಘಟನೆಗೆ ರಂಗು ತುಂಬುವಂಥ ಸಂಚಲನದಲಿ ಸಂಚಲನಕೆ ಶೋಭೆ ತರುವ ದಿವ್ಯ ವಾದ್ಯಗಣದಲಿ ಮೆರೆಯುತಿರುವ ಘೋಷದಂಡ ಅದುವೆ ನಿನಗೆ […]

Read More

ಮೂಕವಾಯಿತು ವಂಶಿ

ಮೂಕವಾಯಿತು ವಂಶಿ ಶೋಕ ತಳೆಯಿತು ಶಂಖ ಸ್ತಬ್ಧವಾಯಿತು ಪಣವ ಆನಕದ ರಣನ ವಾದ್ಯಗಳ ಭೋರ್ಗರೆತ ತಾಳಿಹುದು ಮೌನ, ಸುಬ್ಬಣ್ಣನಾ ಸ್ಮೃತಿಗೆ ಕಣ್ಣೀರ ನಮನ || ಪ || ಶುಭ್ರ ಮೈಕಾಂತಿಗೆ ಧವಳ ಶೀಲದ ಮೆರಗು ಎಳೆಯ ಗೆಳೆಯರ ಸೆಳೆದೆ ಬೆಳೆವ ಪಥಕೆ ಮೊಳಗಿ ಶಂಖೋದ್ಘೋಷ ಪಾರ್ಥಸಾರಥಿಯಾದೆ ಅಶ್ವಗಳು ನಾವೆಲ್ಲ ನಾಡ ರಥಕೆ || 1 || ಲಯಬದ್ಧ ಸಂಚಲನ ಸ್ವರ ಶುದ್ಧ ಸಂಕಲನ ಮೇಲೆತ್ತಿ ಪಿಡಿದಿದ್ದೆ ಧ್ಯೇಯದಂಡ ನಿತ್ಯ ನೂತನ ವಾದ್ಯ ಏನದರ ವೈವಿಧ್ಯ ಪುಳಕಗೊಂಡಿತು ಸಕಲ […]

Read More