ಉತ್ಸಾಹ ಚಿಮ್ಮುವ ಹರೆಯದಲಿ ಗುರಿಗಾಗಿ ಕಾತುರ ಛಲವಿರಲಿ ಥಳುಕಿನ ಚಂಚಲ ಹರಿವಿನಲಿ ದೃಢ ನಿರ್ಧಾರದ ನೆಲೆಯಿರಲಿ ||ಪ|| ಯೌವನ ಹೊಮ್ಮುವ ತನುವಿರಲಿ ಅಂಜಿಕೆ ಅಳುಕು ಕಾಡದಿರಲಿ ಪ್ರವಾಹದೆದುರು ಸೆಣಸಿನಲಿ ಅದಮ್ಯ ವಿಶ್ವಾಸ ಹುದುಗಿರಲಿ || 1 || ತಾರುಣ್ಯ ತೋರುವ ಕನಸಿನಲಿ ಹೊಸ ವಸಂತದ ಚಿಗುರಿರಲಿ ಹೊನ್ನ ಕಿರಣದ ಚೆಲುವಿನಲಿ ಭೂಮಿಯ ಬಳುವಳಿ ನೆನಪಿರಲಿ || 2 || ತುಡಿಯುವ ತೋಳಿನ ಬೀಸಿನಲಿ ಸಿರಿಯನು ಸೃಜಿಸುವ ಕಸುವಿರಲಿ ಮಿಡಿಯುವ ಹೃದಯದ ಹಾಸಿನಲಿ ಸೇವೆಯ ಆದರ್ಶ […]