ಸೇವೆಯೆಂಬ ಯಜ್ಞದಲ್ಲಿ ಸಮಿಧೆಯಂತೆ ಉರಿಯುವಾ ಧ್ಯೇಯ ಮಹಾಜಲಧಿಯೆಡೆಗೆ ಸಲಿಲವಾಗಿ ಹರಿಯುವಾ ಲೋಕಹಿತದ ಕಾಯಕ ನಾಡಿಗಭಯದಾಯಕ ವ್ಯಕ್ತಿವ್ಯಕ್ತಿಯಾಗಲಿಂದು ನೈಜ ರಾಷ್ಟ್ರಸೇವಕ || ಪ || ಉಚ್ಚನೀಚ ಭೇದವ ಅಳಿಸಿ ದೂರಗೊಳಿಸುವಾ ರೊಚ್ಚು ರೋಷ ನೀಗುತಾ ಬಂಧು ಭಾವ ಬೆಳೆಸುವಾ ಹಚ್ಚಿ ಜ್ಞಾನದೀವಿಗೆ ಸುತ್ತ ಬೆಳಕ ಬೀರುವಾ ಕೆಚ್ಚಿನಿಂದ ಮುಂದೆ ಸಾಗಿ ಭರದಿ ಗುರಿಯ ಸೇರುವಾ || 1 || ಎಲೆಯ ಮರೆಯೊಳರಳಿ ನಗುವ ಸುಮನರಾಶಿಯಂದದಿ ಕಡಲ ಒಡಲೊಳುಕ್ಕಿ ಮೊರೆವ ಕೋಟಿ ಅಲೆಗಳಂದದಿ ವಿಮುಖರಾಗಿ ಖ್ಯಾತಿಗೆ ಪ್ರಚಾರಕೆ ಪ್ರಶಂಸೆಗೆ ಸಹಜಭಾವದಿಂದ […]