ನರಕನೋವಲಿ ಜನನಿ ನರಳುವುದ ತಾ ಕಂಡು ಸಮ್ಮಾನ ಸುಖಸುಧೆಯ ತ್ಯಜಿಸಿದವನಾರು ? ಅಗ್ನಿಗಾಹುತಿ ಎನ್ನ ಸರ್ವಸುಖವೆಂದು ಕಾಲಕೂಟದ ಕುಡಿದ ಕಲಿಪುರುಷನಾರು ? || ಪ || ಮಾತಿರದ ಕಂಠದೊಳು ಭಯಭೀತ ಭಾವದೊಳು ಹಿಂದು ಬಂಧುಗಳೆಲ್ಲ ಹರಿದು ಹಂಚಿರಲು ವರುಷ ಸಾಸಿರದಿಂದ ಪದಪ್ರಹಾರವ ಸಹಿಸಿ ತನ್ನ ಅಸ್ತಿತ್ವವನೆ ತಾನು ಮರೆತಿರಲು ಆತ್ಮವಿಸ್ಮೃತಿಯೆಂದು ಪತನ ನಿಶ್ಚಿತವೆಂದು ಬಾಂಧವರನೆಚ್ಚರಿಪ ಕರೆ ಕೊಟ್ಟನಾರು ? || 1 || ಅಪಹಾಸ ಉಪಹಾಸ ಎಲ್ಲೆಡೆಯು ಧ್ವನಿಸುತಿರೆ ದುಃಖ ದುಮ್ಮಾನದಲಿ ತಾಯೊಡಲು ಸೂಸುತಿರೆ ಕುಪುತ್ರ ಕೋಟಿ […]