ಧ್ಯೇಯಧಾರೀ ಸಾಗು ಸಂತತ ತ್ಯಾಗ ಸೇವಾ ಕಾರ್ಯಪಥದಿ || ಪ || ವ್ಯಕ್ತಿಗತ ಯಶ ಸೌಖ್ಯ ಶ್ರೇಷ್ಠತೆ ಪಡೆವ ಬಹು ಮನದಾಸೆ ತೊರೆದು ಭಕ್ತಿ ಭಾವನೆ ತುಂಬಿ ಮನದಲಿ ರಾಷ್ಟ್ರಪುರುಷನ ಮೂರ್ತಿ ಕೊರೆದು ಸೂಕ್ತ ಸಾದರ ಗಂಧ ಕೃತಿಸುಮ ಶೀಲ ಕತ್ತುರಿ ಪಾದ ಕೆರೆದು ಶಕ್ತಿ ದೀಪವನುರಿಸಿ ಹೃದಯದ ನಿಷ್ಠೆ ಪ್ರಭೆಯಾರತಿಯ ಗೈದು ಮೌಕ್ತಿಕದ ಸರ ಸೇವೆ ಸಲಿಸುತ ಪೂಜಿಸುತ ನಡೆ ಧ್ಯೇಯಪಥದಿ || 1 || ವೈರಭಾವನೆ ಮನದಿ ಸುಳಿಯದೆ ಸ್ವಾಭಿಮಾನವ ತುಂಬಿ ಉರದಿ ಅರ […]
ಭೋಗ ಮೆಟ್ಟಿ ತ್ಯಾಗ ಮೆರೆದ ಕರ್ಮಭೂಮಿ ಭಾರತ ಮನುಜರಾಗಿ ಹುಟ್ಟಲಿಲ್ಲಿ ಜನುಮಜನುಮ ಸುಕೃತ || ಪ || ನಾಲ್ಕುದಿನದ ಬಾಳು ನಮದು ಆಗಲಿಂದು ಸಾರ್ಥಕ ತ್ಯಾಗ ಮೆರೆದು ಅಮರರಾದ ಸಂತರೆಮೆಗೆ ಪ್ರೇರಕ ಮಣ್ಣ ಋಣವ ಕಳೆವುದಕ್ಕೆ ಸೇವೆಯೊಂದೇ ಸಾಧಕ ನಗುತ ನಲಿವ ರಾಷ್ಟ್ರಕ್ಕಾಗಿ ಸಾಗಬೇಕು ಕಾಯಕ || 1 || ಧ್ಯೇಯ ಪಥವ ಬಿಟ್ಟ ಬಾಳ್ವೆ ಬೇಡ ನಮಗೆ ನೀರಸ ಪರರಿಗಾಗಿ ಸತತ ಮಿಡಿವ ಹೃದಯದಿಂದ ಸಂತಸ ಕಳೆದು ಬಿಡುವ ರೋಷ ದ್ವೇಷ ಎಲ್ಲ ಮನದ ಕಲ್ಮಶ […]