ಸಂಘಗಂಗೆಯ ಭಾವಜಲದಲಿ ಮಿಂದು ಬಂದಿಹ ಯೋಧನೇ | ಕಾರ್ಯವದು ಕೈಬೀಸಿ ಕರೆದಿದೆ ತೋರು ನಿನ್ನಯ ಸಾಧನೆ || ಪ || ಧರ್ಮಪಥವಿದೆ ಕರ್ಮರಥವಿದೆ ರಥಕೆ ನೀನೇ ಸಾರಥಿ ವೇಗನಿನ್ನದು ವಾಘೆ ನಿನ್ನದು ಹರಸುತಿರುವಳು ಭಾರತಿ || 1 || ನಿಷೇಧದಂಚಿದೆ ವಿಧಿಯ ಮಾರ್ಗಕೆ ಚರಿತವಿರಚಿತ ಗುರುತಿದೆ ಬುದ್ಧಿ ತನುಮನ ತಿದ್ದಿ ತೀಡಲು ಗುರುವಿನೊಲವಿನ ಕೃಪೆ ಇದೆ || 2 || ಪೂರ್ವಜನ್ಮದ ಪುಣ್ಯ ನಿನ್ನದು ತೇರನೆಳೆಯುವ ಕಾಯಕ ಭರತಮಾತೆಯ ವಿಶ್ವವಿಜಯಕೆ ಸಮಯಕೊದಗಿಹ ಸೇವಕ || 3 ||