ತಾಯಿ ಕರೆಯುತಲಿಹಳು ಕಣ್ತೆರೆದು ನೋಡು

ತಾಯಿ ಕರೆಯುತಲಿಹಳು ಕಣ್ತೆರೆದು ನೋಡು ತನ್ನ ಸಂತತಿಯ ತಾ ಹರಸಲೆಂದು || ಪ || ಅಣ್ಣಂದಿರಿರುವಲ್ಲಿ ಅನುಜನಾಗುತ ಬಾಳು ಎಳೆಯ ಮನಗಳಿಗೆ ನೀ ಹಿರಿಯನಾಗು ನಭವ ಸೇರಿದ ಮೇಘ ಮಳೆಯಾಗುವಾ ತೆರದಿ ನಾನೆಂಬ ಭಾವವನು ಕಳಚಿ ಹೋಗು || 1 || ಅದು ಏಕೆ? ಇದು ಏಕೆ? ಸಂದೇಹವನು ತೊರೆದು ಶುದ್ಧ ಭಾವವ ಮನದಿ ತಳೆದು ಸಾಗು ನೀರ ಸ್ಪರ್ಶದಿ ಭೂಮಿ ಹಸಿರುಡುಗೆ ತೊಡುವಂತೆ ಸಂಸ್ಕೃತಿಯ ಸಿಂಚನದಿ ಧ್ಯೇಯಿಯಾಗು || 2 || ಮನದ ದೌರ್ಬಲ್ಯವನು ಹರಿದೊಗೆದು […]

Read More

ತಾಯಿ ಕಾದಿಹಳಿಂದು ಆ ನರೇಂದ್ರನಿಗಾಗಿ

ತಾಯಿ ಕಾದಿಹಳಿಂದು ಆ ನರೇಂದ್ರನಿಗಾಗಿ ಸಿಂಹಸದೃಶನಿಗಾಗಿ ಓ ಧೀರರೇ ಸ್ವಾರ್ಥವನು ಕಿತ್ತೊಗೆದು ಸರ್ವಸ್ವವನು ಸುರಿದು ನಿಲ್ಲಬಲ್ಲಿರೇ ಭರತದೇಶಾತ್ಮರೇ || ಪ || ಜನಿಸಿ ಕಲಕತ್ತೆಯಲಿ ರಾಮಕೃಷ್ಣರ ಶಿಷ್ಯ ಸುತ್ತಿದನು ಭಾರತವ ಬರಿಗಾಲಲಿ ರಾಷ್ಟ್ರ ಪರಪದತಳದಿ ನರಳುವುದ ತಾ ಕಂಡು ಹರಿಕಾರನಾದನಾ ಸಂಕ್ರಾಂತಿಗೆ || 1 || ಹಿಂದು ಸತ್ವೋನ್ನತಿಯ ವಕ್ತಾರ ತಾನಾಗಿ ಮಿತ್ರನಾದನು ವಿಶ್ವವೇದಿಕೆಯಲಿ ಸಂದ ಗೌರವ ಸಿದ್ಧಿಯಾಪದವಿಯೆಲ್ಲವನು ಅರ್ಪಿಸಿದ ಭಾರತಿಯ ಪಾದಾಬ್ಜಕೆ || 2 || ಆ ಮಹಾತ್ಮನ ತನುವು ಮನ ಧನ ದಗ್ಧವಾಯಿತು ದೇಶದುದ್ಧಾರಕೆ […]

Read More

ಮುನಿಸು ತೊರೆದು ಹರುಷ ತೋರು

ಮುನಿಸು ತೊರೆದು ಹರುಷ ತೋರು ನಮ್ಮ ತಾಯಿ ಭಾರತೀ ಹರಸು ನಮ್ಮ ಶಿರವ ಪಿಡಿದು ತರುವೆವಮ್ಮ ಕೀರುತಿ || ಪ || ಹೊಂಚು ಹಾಕಿ ಹಿರಿಯಲೆಂದು ಅಡಗಿ ಕುಳಿತ ಅರಿಗಳು ಬಿಡುವೆವೇನು ಕಡಿವೆವಲ್ಲೆ ನಾವು ಧೀರ ಮಕ್ಕಳು ಚೆನ್ನಮ್ಮ ಲಕ್ಷ್ಮೀ ನಾವೇ ಕ್ಷಾತ್ರ ತೇಜ ಕುಡಿಗಳು || 1 || ಪ್ರತಿ ಗೃಹದ ಒಳಗಿನಿಂದ ಕೇಳುತ್ತಿದೆ ಮೊಳಗು ಭೈರವಿಯ ಶಕ್ತಿಧರಿಸಿ, ತರುವೆವು ಬೆಳಗು ಬೇಡವೆಮಗೆ ಸ್ವತ್ವವಿರದ ವಿದೇಶೀಯರ ಬೆಡಗು ಸ್ವದೇಶ ಭಾಷೆ ವಸ್ತ್ರವೆಮಗೆ ಎಂದೆಂದೂ ಸೊಬಗು || […]

Read More

ನಮ್ಮ ತಾಯಿ ಭಾರತಿ

ನಮ್ಮ ತಾಯಿ ಭಾರತಿ ನಮ್ಮ ಹಿಂದು ಸಂಸ್ಕೃತಿ ನಮ್ಮ ದೇಶ ಭಾರತ ನಮಗೆ ಸದಾ ಪೂಜಿತ ನಾವು ಭಾರತೀಯರೂ ನಾವು ಬಂಧು ಬಾಂಧವರು || ಪ || ಭಾಷೆ ಬೇರೆ ವೇಷ ಬೇರೆ ದೇಶ ಮಾತ್ರ ಒಂದೇ ಜಾತಿ ಬೇರೆ ರೀತಿ ಬೇರೆ ನೀತಿ ಮಾತ್ರ ಒಂದೇ ಭಿನ್ನಮತೀಯರಾದರೂ ನಾವು ಭಾರತೀಯರು || 1 || ಗಂಗೆ ತುಂಗೆ ಯಮನೆಯರು ಹರಿವ ಪುಣ್ಯನಾಡಿದು ಹಿರಿಮೆ ಗರಿಮೆ ಪ್ರಕೃತಿ ಸಿರಿಯು ಇರುವ ಗಣ್ಯ ಬೀಡಿದು ನಮ್ಮ ತಾಯಿ ನಾಡಿದು […]

Read More

ತಾಯಿ ಭಾರತಿಯ ಪಾದಪದ್ಮಗಳ

ತಾಯಿ ಭಾರತಿಯ ಪಾದಪದ್ಮಗಳ ಪೂಜಿಸೋಣ ಬನ್ನಿ | ಹಿಂದು ಸಾಗರದ ಬಿಂದುಬಿಂದುಗಳೆ ಒಂದುಗೂಡಿ ಬನ್ನಿ || || ಪ || ಧ್ಯೇಯಭಾಸ್ಕರನ ದಿವ್ಯಕಿರಣಗಳ ನವ್ಯರಮ್ಯಲಾಸ್ಯ ತರುಣರಂಗದೊಳು ಅರುಣಗೈಯುತಿಹ ನವೋದಯದ ನಾಟ್ಯ ಬಾಹುಬಾಹುಗಳ ಸ್ಫುರಣಗೊಳಿಸುತಲಿ ನಲಿಯುತೀಗ ಬನ್ನಿ || || 1 || ಶಕ್ತಿಯಿಂದ ಅಭಿವ್ಯಕ್ತಗೊಳಿಸಿರೈ ದೇಶಭಕ್ತಿಯನ್ನು ತಪ್ತಮನಗಳಲಿ ಸುಪ್ತವಾಗಿರುವ ಧ್ಯೇಯದೀಪ್ತಿಯನ್ನು ತ್ಯಾಗ ಸಾಹಸದ ಪುಷ್ಪಮಾಲೆಯನು ತಾಯ್‍ಗೆ ತೊಡಿಸಬನ್ನಿ || || 2 || ಮಾತೃಭುವಿಯ ವಿಚ್ಛಿದ್ರಗೊಳಿಸುತಿರೆ ಕ್ಷುದ್ರ ಅರಿಯ ಸಂಚು ಪ್ರಲಯರುದ್ರನುರಿಗಣ್ಣ ತೆರೆಸಿರೈ ಹರಿಸಿ ಪ್ರಖರ ಮಿಂಚು […]

Read More

ಹೇ ತಾಯೇ ಹೊರಟಿಹೆನು ಈ ನಾಡ ಗಡಿಗೆ

ಹೇ ತಾಯೇ ಹೊರಟಿಹೆನು ಈ ನಾಡ ಗಡಿಗೆ ಜಯ ಮಾಲೆಯ ನಾ ತರುವೆ ನಿನ್ನಾ ಮುಡಿಗೆ ನಿನ್ನಾ ಹಾಡುವವರಿಗೆ ನಾ ನಮಿಸುತಿಹೆನು ಯಶಗೊಳಲಿ ನಾ ಎಂದು ಹರಸು ನೀನು || ಪ || ಈ ನಾಡ ಗಡಿಯಲ್ಲಿ ಆ ದುಷ್ಟ ಸಂಚು ಅವಗೆ ನಾ ಮಾಡುವೆನು ಸರಿಯಾದ ಹೊಂಚು ವೀರ ರಕ್ತವ ಪಡೆದ ಮಾತೆಯುsss ನೀನು ನಿನ್ನೆದೆಯ ಹಾಲಿನಲಿ ಬೆಳೆದೆss ನಾನು || 1 || ಹಿಂದೊಮ್ಮೆ ಬಂದಿತ್ತು ಸ್ವಾತಂತ್ರ್ಯ ಕರೆಯು ಹಿರಿಮೆಯಲಿ ಬೆಳೆದಿತ್ತು ಈ ನಾಡ […]

Read More

ತಾಯೆ ಭಾರತಿ ನಿನ್ನ ಮೂರುತಿ

ತಾಯೆ ಭಾರತಿ ನಿನ್ನ ಮೂರುತಿ ಎದೆಯ ಗುಡಿಯೊಳಿಟ್ಟು ಭಜಿಸಿ ಜ್ವಲಿಪೆನಾರತಿ || ಪ || ಜಗಕೆ ಮೊದಲ ಜ್ಞಾನ ಕಿರಣದಾತ್ರಿ ಎಂಬ ಕೀರುತಿ ಪ್ರೇಮ ಶಾಂತಿ ಸ್ನೇಹಗಳಲಿ ಸದಾ ನಿನ್ನ ಅನುರತಿ ಆತ್ಮದೀಕ್ಷೆ ನೀಡಿ ಜನರ ತಮವ ಕಳೆವ ಸತ್ಕೃತಿ ಮರ್ಮವರುಹಿ ವಿಶ್ವಕ್ಕೆಲ್ಲ ಮಾರ್ಗ ತೋರುತಿ || 1 || ತಾಯೆ ನಿನ್ನ ಉದರದಲ್ಲಿ ಬಂದ ರಾಮ ರಘುಪತಿ ಪಾಂಚಜನ್ಯ ಮೊಳಗಿ ಗೀತೆಯೊರೆದ ಪಾರ್ಥಸಾರಥಿ ವ್ಯಾಸ ಬುದ್ಧ ಮಧ್ವ ಬಸವ ಶಂಕರಾದಿ ಋಷಿಯತಿ ಶಿವ ಪ್ರತಾಪರೆಮಗೆ ವಂದ್ಯ […]

Read More

ಈ ತಾಯಿನಾಡಿನ ಯೋಧರು ನಾವು

ಈ ತಾಯಿನಾಡಿನ ಯೋಧರು ನಾವು ಸ್ವಾತಂತ್ರ್ಯದ ಉನ್ಮತ್ತರು ನಾವು || ಪ || ಬಲಿವೇದಿಕೆಯಲಿ ನಗುನಗುತ ತಲೆಯೊಡ್ಡುವ ವೀರರು ನಾವು ಜನನಿಯ ವೀರ ಪೂಜಾರಿಗಳು ಸರ್ವಸ್ವಾರ್ಪಣ ಗೈವವರು ದೇಶಪ್ರೇಮದ ಮಧುರಸದಿ || 1 || ದೇಶಪ್ರೇಮದ ಮಧುರಸದಿ ಮುಳುಗಿಹುದೆಮ್ಮೀ ಜೀವನವು ತನು ಮನ ಧನ ಜೀವನವೆಲ್ಲಾ ನಮ್ಮೀ ನಾಡಿಗೆ ಅರ್ಪಿತವು ಸಮರದೊಳಿಟ್ಟಡಿಯನು ಮರಳಿ ಹಿಂದೆಗೆಯದ ವೀರರು ನಾವು || 2 || ಆರ್ಯವೀರ ಸಂತಾನರು ನಾವು ಭಾರತ ಸಿರಿಯನು ಬೆಳಗುವೆವು ರಣದೊಳು ಕಾದುತ ಮಡಿಯುವೆವು ಸಮರ್ಥರೆನಿಸುತ ಬಾಳುವೆವು […]

Read More