ಈ ತಾಯಿನಾಡಿನ ಯೋಧರು ನಾವು

ಈ ತಾಯಿನಾಡಿನ ಯೋಧರು ನಾವು ಸ್ವಾತಂತ್ರ್ಯದ ಉನ್ಮತ್ತರು ನಾವು || ಪ || ಬಲಿವೇದಿಕೆಯಲಿ ನಗುನಗುತ ತಲೆಯೊಡ್ಡುವ ವೀರರು ನಾವು ಜನನಿಯ ವೀರ ಪೂಜಾರಿಗಳು ಸರ್ವಸ್ವಾರ್ಪಣ ಗೈವವರು ದೇಶಪ್ರೇಮದ ಮಧುರಸದಿ || 1 || ದೇಶಪ್ರೇಮದ ಮಧುರಸದಿ ಮುಳುಗಿಹುದೆಮ್ಮೀ ಜೀವನವು ತನು ಮನ ಧನ ಜೀವನವೆಲ್ಲಾ ನಮ್ಮೀ ನಾಡಿಗೆ ಅರ್ಪಿತವು ಸಮರದೊಳಿಟ್ಟಡಿಯನು ಮರಳಿ ಹಿಂದೆಗೆಯದ ವೀರರು ನಾವು || 2 || ಆರ್ಯವೀರ ಸಂತಾನರು ನಾವು ಭಾರತ ಸಿರಿಯನು ಬೆಳಗುವೆವು ರಣದೊಳು ಕಾದುತ ಮಡಿಯುವೆವು ಸಮರ್ಥರೆನಿಸುತ ಬಾಳುವೆವು […]

Read More