ಬಾ ಬಾ ಸಂಘಸ್ಥಾನದ ಕಡೆಗೆ || ಪ || ಸ್ವಾರ್ಥದ ಸೋಪಾನದ ತುಳಿತುಳಿಯುತ ಬಾಬಾ ಭೂಮಾತೆಯ ಮಡಿಲೆಡೆಗೆ ಉರಿಯಾರದೆ ಕಿಡಿ ಕಾರದೆ ಬೆಳಗುವ ಚಿರಸ್ನೇಹದ ವರದೀಪದ ಕಡೆಗೆ || 1 || ತುಂಬಿದ ಹೃದಯದ ಸೋದರವೃಂದವು ಆದರದಿಂದಲಿ ಕರೆಯುವ ಕಡೆಗೆ ಎದೆಯಾಳದಿ ಅತಿ ಪ್ರೀತಿಯ ಮಮತೆಯ ಮೈತ್ರಿಯ ಸಾಗರ ಮೊರೆಯುವ ಕಡೆಗೆ || 2 || ಸ್ವಾರ್ಥವ ಮರೆಯಿಸಿ ಸ್ಫೂರ್ತಿಯ ದೊರಕಿಸಿ ಭಾವಾವೇಶವು ಹೊಮ್ಮುವ ಕಡೆಗೆ ಚೇತನಚಿಲುಮೆಯ ಶತಶತ ಧಾರೆಯ ಬಗೆಯಾವೇಗವು ಚಿಮ್ಮುವ ಕಡೆಗೆ || 3 […]