ಸ್ವರ್ಗದ ಸೊಬಗನು ಮೀರಿಸಿ ಮೆರೆದಿಹ

ಸ್ವರ್ಗದ ಸೊಬಗನು ಮೀರಿಸಿ ಮೆರೆದಿಹ ಭಾರತದ ಅಂಗಳದಲ್ಲಿ ಕೇಶವ ಉರಿಸಿದ ಸಂಘದ ಹಣತೆಯು ಬೆಳಗಿತು ಜನಮನ ಮನದಲ್ಲಿ || ಪ || ತನ್ನೀ ನೆಲಜಲ ಧರ್ಮಸಂಸ್ಕೃತಿ ಹಿಂದೂ ಜನತೆಯು ಮರೆತಿರಲು ದಾಸ್ಯದ ಉರುಳಿಗೆ ಕೊರಳನು ನೀಡಿ ಸ್ವಾರ್ಥದ ಕೂಪದಿ ಮುಳುಗಿರಲು ಘೋರ ನಿರಾಶೆಯ ಘನ ತಿಮಿರದಿ ತಾ ಯುವ ಜನತೆಯು ಎದೆಗುಂದಿರಲು ಕೇಶವ ತೋರಿದ ಧ್ಯೇಯದ ಗಾದಿ ಅಂತಿಮ ವಿಜಯದ ಹಾದಿಯೊಳು ಮಾತೆಯ ಸೇವೆಯ ಅನುದಿನ ಮಾಡಲು ಜೀವನವನೆ ಮುಡಿಪಾಗಿಡಲು || 1 || ಭಾರತದೇಶದ ಭವ್ಯಪರಂಪರೆ […]

Read More

ಧರೆಗವತರಿಸಿದೆ ಸ್ವರ್ಗದ ಸ್ಪರ್ಧಿಯು

ಧರೆಗವತರಿಸಿದೆ ಸ್ವರ್ಗದ ಸ್ಪರ್ಧಿಯು ಸುಂದರ ತಾಯ್ನೆಲವು ನಮ್ಮೀ ತಾಯ್ನೆಲವು ದೇವೀ ನಿನ್ನಯ ಸೊಬಗಿನ ಮಹಿಮೆಯ ಬಣ್ಣಿಸಲಸದಳವು || ಪ || ಧವಳ ಹಿಮಾಲಯ ಮುಕುಟದ ಮೆರುಗು ಕಾಲ್ತೊಳೆಯುತಲಿದೆ ಜಲಧಿಯ ಬುರುಗು ಗಂಗಾ ಬಯಲಿದು ಹಸಿರಿನ ಸೆರಗು ಕಣಕಣ ಮಂಗಲವು ನಮ್ಮೀ ತಾಯ್ನೆಲವು      || 1 ||         ಕಾಶಮೀರದಲಿ ಸುರಿವುದು ತುಹಿನ ರಾಜಸ್ಥಾನದಿ ಸುಡುವುದು ಪುಲಿನ ಮಲಯಾಚಲದಲಿ ಗಂಧದ ಪವನ ವಿಧವಿಧ ಹೂ ಫಲವು ನಮ್ಮೀ ತಾಯ್ನೆಲವು     || […]

Read More