ಸಿಂಧುಸಾಗರದಿಂದ ಮಾರುತ ಬಂದು ಬಯಸುತ ಸ್ವಾಗತ ಹಿಂದುಹಿಂದುವು ಬನ್ನಿರಿಲ್ಲಿಗೆ ದೇವಸನ್ನಿಧಿಗೆನ್ನುತ || ಪ || ಪೂರ್ವದಿಕ್ಕಿನ ದ್ವಾರದ್ವಾರಕು ಹಸುರು ಘಟ್ಟದ ತೋರಣ ಕೆಳಗೆ ಪಶ್ಚಿಮ ತೀರದುದ್ದಕು ನೀಲವಾರಿಧಿಯಂಗಣ ನಡುವೆ ಅರಳಿದ ಬಾಳಸಂಪದವಿಲ್ಲಿ ಬಂಧುರ ಸುಂದರ ತಲೆಯ ತೂಗುವ ತಂಪನೆರೆಯುವ ತೆಂಗುಕಂಗಿನ ಹಂದರ || 1 || ವರುಷವೈದರ ಹಿಂದೆ ಶ್ರಾವಣ ಬಹುಳ ಅಷ್ಟಮಿ ಹಬ್ಬದ ದಿನವೆ ಜನಿಸಿತು ಭರದಿ ಬೆಳೆಯಿತು ವಿಶ್ವಹಿಂದೂಪರಿಷದ ತೀರ್ಥರಾಜ ಪ್ರಯಾಗ ಕ್ಷೇತ್ರದಿ ಕುಂಭಪರ್ವದಿ ಕಲೆಯುತ ವಿಶ್ವದಗಲಕು ಕುಡಿಯ ಚಾಚಿತು ಕುಡಿದು ತಾ ಧರ್ಮಾಮೃತ […]
ಜನಸ್ವಾತಂತ್ರ್ಯದ ಸೂರ್ಯೋದಯದಲಿ ಸುಸ್ವಾಗತ ಜನಮನ ದೊರೆಗೆ ಸುವಿಚಾರದ ಮಧುವೆರೆಯುತ ಬಂದಿಹ ಶ್ರೀ ಮಧುಕರ ದೇವರಸರಿಗೆ || ಪ || ಸೆರೆಮನೆಯಿಂದಲೆ ಸೂತ್ರವ ಆಡಿಸಿ ಎರೆದಿರಿ ಸ್ಫೂರ್ತಿಯ ಯುವಜನಕೆ ದಾಸ್ಯದ ದುಃಖವ ತೊಲಗಿಸಿದಾತನೆ ಸ್ವಾಗತವಿದೊ ಕರ್ನಾಟಕಕೆ || 1 || ತೆಂಕಣ ಅಡವಿಯ ಘೀಳಿಡುವಾನೆಯ ಸೊಂಡಿಲ ಕಹಳೆಯ ಮೊಳಗಿನಲಿ ಸಂತರ ಶರಣರ ದಾಸವರೇಣ್ಯರ ಬೋಧನೆ ಕೀರ್ತನೆ ವಚನದಲಿ || 2 || ತುಂಗಾಭದ್ರೆಯ ಕೃಷ್ಣಾ ಕಪಿಲೆಯ ಕಾವೇರಿಯ ಕಲರವದೊಳಗೆ ಕನ್ನಡ ಜನದಾತ್ಮೀಯತೆ ಸೂಸುವ ಶ್ರೀಗಂಧದ ಸೌರಭದೊಳಗೆ || 3 […]
ಯೋಧರೇ ಬಯಸಿ ಬನ್ನಿ ಶುಭೋದಯಕೆ ಸ್ವಾಗತ ಸ್ವರಾಷ್ಟ್ರದಾಕಾಶದಲ್ಲಿ ಸುಪ್ರಭಾತ ಸೃಜಿಸುತ || ಪ || ಏಳಿ ಏಳಿ ಬಯಲಗಾಳಿ ಸುಖಾಗಮನ ಹೇಳಿದೆ ಹೆಜ್ಜೆ ಹೆಜ್ಜೆಗೂ ಸ್ವದೇಶ ತನ್ನ ಮಹಿಮೆ ತಿಳಿಸಿದೆ ಯಜ್ಞಭೂಮಿ ಯಾಗಭೂಮಿ ತ್ಯಾಗಭೂಮಿ ಭಾರತ || 1 || ನದಿಸಮೂಹ ಮಂತ್ರ ಹಾಡಿ ನಿತ್ಯ ಸ್ಪೂರ್ತಿ ನೀಡಿದೆ ಜನರ ಮನವ ನೆಲದ ಕಣವ ಅತಿ ಪವಿತ್ರ ಮಾಡಿದೆ ಮಾತೃಭೂಮಿ ಪಿತೃಭೂಮಿ ಗುರುಸ್ವರೂಪಿ ಭಾರತ || 2 || ಅನಾದಿಯಿಂದ […]