ರಾಷ್ಟ್ರೋದ್ಧಾರದ ಮೂಲಮಂತ್ರ ಸ್ವಾಭಿಮಾನ ದೇಶಾಭಿಮಾನ ದಿಗ್ವಿಜಯದ ಭುಜಕೀರ್ತಿಯ ಧರಿಸಿ ಮೊಳಗಲಿ ಮಾತೆಯ ಜಯಜಯಗಾನ || ಪ || ಕಲ್ಲುಮುಳ್ಳುಗಳ ಹಾದಿಯಲಿ ಎದೆಗುಂದದೆ ಸಂಚರಿಸೋಣ ವಿಘ್ನ ವಿರೋಧವನೆದುರಿಸುತ ಭರದಲಿ ಗುರಿಯನು ಸೇರೋಣ || 1 || ನಾಡನೆ ನುಂಗುವ ಹೊಂಚುಗಳ ವಿದ್ರೋಹದ ಶತ ಸಂಚುಗಳ ವಿಫಲಗೊಳಿಸುವೆವು ನಾವಿಂದು ಸಬಲಗೊಂಡಿಹುದು ನಾಡಿಂದು || 2 || ರಾಷ್ಟ್ರವ ಕಟ್ಟುವ ಕಾಯಕಕೆ ಅರೆಕ್ಷಣವೆಲ್ಲಿದೆ ವಿಶ್ರಾಂತಿ? ನಿತ್ಯ ನಿರಂತರ ಜಾಗರಣ ಸನಿಹಕೆ ಬಂದಿದೆ ಸಂಕ್ರಾಂತಿ || 3 ||
ದಾಹ ದಾಹ ದಿಗ್ವಿಜಯಕೆ, ಸ್ವಾಭಿಮಾನ ಭರಿತ ಹೃದಯಕೆ ಸ್ವತಂತ್ರ ಜನತೆಯೆದೆಯ ಬೆಂಕಿ ಆರದೆಂದು ಆರದು ಮಾತೃಭೂಮಿಗಳಿವು ದಾಸ್ಯ ಬಾರದೆಂದು ಬಾರದು || ಪ || ಹಸಿರು ಘಟ್ಟ ಹಿಮದ ಬೆಟ್ಟ ಜಲಧಿ ಗಗನ ನಮ್ಮದು ದುಷ್ಟತನವ ಮೆಟ್ಟಿ ನಿಲುವ ನ್ಯಾಯ ನಿಷ್ಠೆ ನಮ್ಮದು ಪ್ರಿಯ ಸ್ವದೇಶ ರಕ್ಷಣಾರ್ಥ ಹೊರಟೆವಿದೋ ಹೊರಟೆವು ಕಡೆಯ ತನಕ ಗೆಲ್ಲುವನಕ ನಿಲ್ಲೆವೆಲ್ಲು ನಿಲ್ಲೆವು || 1 || […]