ಸ್ವಾತಂತ್ರ್ಯ ಸ್ವಾಮಿತ್ವ

ಸ್ವಾತಂತ್ರ್ಯ ಸ್ವಾಮಿತ್ವ ಸ್ವಬಲ ಸ್ವಾಧೀನತೆಯ ನಿಮ್ಮೆದೆಯ ಸತ್ವದುರಿ ಆರದಿರಲಿ ಅಪಮಾನ ಸಹಿಸದಿಹ ಅಭಿಮಾನ ನಿಮಗಿರಲಿ ನಿಮ್ಮೊಡನೆ ನಾವಿರಲಿ ಇಲ್ಲದಿರಲಿ || ಪ || ಭಗ್ನವಾಯಿತು ಕಾಯ ದಗ್ಧವಾಯಿತು ಹೃದಯ ನಗ್ನವಾಯಿತು ನಾಡು ನಮ್ಮೆದುರಿಗೆ ತೀರಿಲ್ಲ ಋಣದ ಹೊರೆ ಮುಂದೆ ನೀವಾದರೂ ಹಿಂದಿರುಗಿಸಿರಿ ಸಾಲ ಇತ್ತವರಿಗೆ || 1 || ನಮ್ಮೆದೆಯ ತುಂಬಿದ್ದ ನಿಮ್ಮುಸುರಿನಾಕಾಂಕ್ಷೆ ನಮ್ಮೊಡಲ ಸಂತಾನ ನಿಮಗೆ ಬರಲಿ ಸೇಡುಗಳ ಪೂರೈಕೆ ಆದರ್ಶದಾರೈಕೆ ಸತ್ಪುತ್ರ ಕರ್ತವ್ಯ ಮರೆಯದಿರಲಿ || 2 || ಸುಖದ ಶಯ್ಯೆಯ ತಂಪು ಮೋಹ […]

Read More