ಸ್ವಾರ್ಥ ದ್ವೇಷ ನಿರಾಸೆ ಜಾಡ್ಯವ ತೊರೆದು ಮೇಲೇಳ್ ಸೋದರ | ಪ್ರೀತಿ ಗೌರವ ತ್ಯಾಗದಿಂ ಕ – ಟ್ಟೋಣ ಭಾರತ ಮಂದಿರ || ಪ || ಗಾಳಿ ನೀರು ಮಣ್ಣು ಮರಕೆ ನಮ್ಮ ಬೆಳೆಸಿದ ಪ್ರಕೃತಿಗೆ | ಏನ ಕೊಟ್ಟೆವು ತಿರುಗಿ ನಾವು ತ್ಯಾಜ್ಯ ಮಲಿನತೆ ವಿಕೃತಿಯ || 1 || ಸತ್ಯ ಧರ್ಮ ನ್ಯಾಯ ನೀತಿ ತ್ಯಾಗ ನಿಷ್ಠೆಯ ಕಲಿಯದೆ | ಶೌರ್ಯ ಸಾಹಸ ಧ್ಯೇಯ ಮೆರೆಯದ ಬದುಕು ತರವೇ ಬಾಳದೇ || 2 || […]
ನಾಡನೊಡೆದು ಗಾದಿಪಡೆದು ಸ್ವತ್ವ ಮರೆತು ಸ್ವಾರ್ಥ ಕಲಿತು ಸ್ವಜನ, ಬಂಧು ಭಗಿನಿಯರನು ವೈರಿ ಸೆರೆಗೆ ದೂಡಿದೆ ; ಹೃದಯ ಹರಿದು ಮನವ ಮುರಿದು ರಾಷ್ಟ್ರದೊಡಲ ಕೊರೆದು ಕೊರೆದು ಮಾತೃಕ್ಷೀರ ಮೂಲೆಗಿರಿಸಿ ಘೋರವಿಷವನೂಡಿದೆ ! || ಪ || ಶೀಲ ಸತ್ಯ ನಲಿದ ನೆಲದಿ, ರಾಮರಾಜ್ಯ ಮೆರೆದ ಸ್ಥಳದಿ ಭ್ರಷ್ಟಗುಣವ ಬೆಳೆದು ಸತ್ಯದೆಲ್ಲ ಹತ್ಯೆಮಾಡಿದೆ ; ವೇದಗಾನ ಭಕ್ತಿಪಾನ, ಶೌರ್ಯ ವಿಭವ ಸ್ವಾಭಿಮಾನ ತೊರೆದು ನಿಂತು ಕರವ ನೀಡಿ ಜಗದಿ ಭಿಕ್ಷೆ ಬೇಡಿದೆ ! || 1 || […]