ಧ್ಯೇಯ ಸಾಧಕನ ದಾರಿ ಸರಳ ಸುಂದರ ಸರಿ ಬದುಕಿನಾ ಸಮಯವಾ ಸವೆದಿಹುದು ಇಲ್ಲಿ || ಪ || ಭಾರತದ ಹಿರಿಮೆಯ ಮರೆತಿರುವ ಸಮಾಜವ ಬಡಿದೆಬ್ಬಿಸುವಾ ಕಾರ್ಯ ಹಗಲಿರುಳು ನಡೆದಿದೆ || 1 || ಸಂಘಟನೆಯ ಮಂತ್ರದಿ ಶತಮಾನದ ಹೊಸ್ತಿಲಲಿ ದೇಶ ವ್ಯಾಪ್ತವಾಗುವ ಕಾರ್ಯ ನಡೆದಿದೆ ನಿತ್ಯ ನಿರುತದಿ || 2 || ತಾಳ್ಮೆಗೊಂದು ಮಿತಿಯಿರಲಿ ಢೋಂಗೀವಾದಿತನಕೆ ಸೆಡ್ಡು ಹೊಡೆಯುವ ದಿನಕೆ ಸಿದ್ಧವಾಗಿದೆ ಭೂಮಿಕೆ || 3 ||
ಜಯ ಜಯ ಭಾರತ ವರ್ಷ ಹಮಾರಾ ತ್ರಿಭುವನ ಸುಂದರ ಪರಮ ಪ್ಯಾರಾ || ಪ || ಶೈಲಶಿಖರ ಶೋಭಾಕೀ ಖಾನಿ, ನದಿಯಾ ಬಹೇ ಸದಾ ಸಮ ಪಾನೀ | ಮಧುರ ನೀರ ಸಬ ಋತು ಸುಖದಾಯಿ, ವಿವಿಧ ಅನ್ನಪ್ರದ ಭೂಮಿ ಹಮಾರೀ || 1 || ವಸ್ತ್ರ ಹೇತು ಉಪಜಾಯ ಕಪಾಸಾ, ಕಿಯಾ ಸಕಲ ಜಗ ತುಮನೇ ದಾಸಾ | ವಿಕಸೇ ವಿವಿಧ […]
ಸುಂದರ ಸೊಬಗಿನ ರಮ್ಯ ರಮಣೀಯ, ನಂದನವನವಿದು ಭಾರತವು ಕಾವೇರಿ ಗಂಗಾ ಯಮುನೆಯು ಹರಿಯುವ, ಬೃಂದಾವನವಿದು ಭಾರತವು || ಪ || ಹಿಮವತ್ಪರ್ವತ ಮಾನಸ ಸರಸಿನ, ಕೈಲಾಸವಾಸಿಯ ಕರುಣೆಯಿದು ಮೂರು ಸಾಗರದ ಸಂಗಮದಂಚಿನ, ನಿತ್ಯ ನೂತನ ಧರಣಿಯಿದು ಮಾನವ ಕುಲದ ಮೌನ ಸಂಜೀವಿನಿ, ಲೋಕ ಪಾವನಿ ಭಾರತವು || 1 || ವೇದ ವೇದಾಂತದ ಉಪನಿಷದಾಗರ, ಮಹಾಕಾವ್ಯಗಳ ತವರಿದುವು ತತ್ವ ಚಿಂತನದ ಜ್ಞಾನ ಜೀವನದ, ಮಾರ್ಗದರ್ಶಿ ಚಿರಸತ್ಯವಿದು ಅನಂತ ಕಾಲದ ಸಾಕ್ಷ್ಯ ಮೋಕ್ಷದ, ತಪೋವರ್ಧಿನಿ ಭಾರತವು || 2 […]
ಒಂದು ದಿನ ಸಂಜೆಯ ಸಮಯ ತಿರುಗಾಡಲು ಹೊರಟಾಗ ಕಂಡೆನು ನಾ ಮನವನು ಸೆಳೆವ ಸುಂದರ ದೃಶ್ಯವನೊಂದ || ಪ || ಮಾರ್ಗದ ಬದಿಯಲಿ ಬಯಲು, ಆ ಬಯಲಲಿ ಮಕ್ಕಳ ಹುಯಿಲು ಮಕ್ಕಳಿಗೆಲ್ಲಾ ಮುಖ್ಯನು ಒಬ್ಬ, ಗರ್ಜಿಸಿತವನಾ ಬಿಗಿಲು ಟಿರ್ರ್ ಟ್ರಿಕ್… ಟಿರ್ರ್ ಟ್ರಿಕ್ …. ತತ್ತರಿಸಿತು ಆ ಮುಗಿಲು || 1 || ದಕ್ಷ ಆರಮ ಆಜ್ಞೆ, ಅದು ಶಿಸ್ತಿಗೆ ಸೂಚಕ ಸಂಜ್ಞೆ ಸಂಜ್ಞೆಯನರಿತು ಸಾಗಿತು ಮುಂದೆ, ತರುಣರ ಬಾಲರ ಸೇನೆ ಏಕ್-ದೋ-ಏಕ್-ದೋ, ಏಕ್-ದೋ-ಏಕ್-ದೋ, ಸಂಪತಗೊಂಡಿತು ತಾನೇ […]
ಧರೆಗವತರಿಸಿದೆ ಸ್ವರ್ಗದ ಸ್ಪರ್ಧಿಯು ಸುಂದರ ತಾಯ್ನೆಲವು ನಮ್ಮೀ ತಾಯ್ನೆಲವು ದೇವೀ ನಿನ್ನಯ ಸೊಬಗಿನ ಮಹಿಮೆಯ ಬಣ್ಣಿಸಲಸದಳವು || ಪ || ಧವಳ ಹಿಮಾಲಯ ಮುಕುಟದ ಮೆರುಗು ಕಾಲ್ತೊಳೆಯುತಲಿದೆ ಜಲಧಿಯ ಬುರುಗು ಗಂಗಾ ಬಯಲಿದು ಹಸಿರಿನ ಸೆರಗು ಕಣಕಣ ಮಂಗಲವು ನಮ್ಮೀ ತಾಯ್ನೆಲವು || 1 || ಕಾಶಮೀರದಲಿ ಸುರಿವುದು ತುಹಿನ ರಾಜಸ್ಥಾನದಿ ಸುಡುವುದು ಪುಲಿನ ಮಲಯಾಚಲದಲಿ ಗಂಧದ ಪವನ ವಿಧವಿಧ ಹೂ ಫಲವು ನಮ್ಮೀ ತಾಯ್ನೆಲವು || […]