ಧರೆಗವತರಿಸಿದೆ ಸ್ವರ್ಗದ ಸ್ಪರ್ಧಿಯು

ಧರೆಗವತರಿಸಿದೆ ಸ್ವರ್ಗದ ಸ್ಪರ್ಧಿಯು ಸುಂದರ ತಾಯ್ನೆಲವು ನಮ್ಮೀ ತಾಯ್ನೆಲವು ದೇವೀ ನಿನ್ನಯ ಸೊಬಗಿನ ಮಹಿಮೆಯ ಬಣ್ಣಿಸಲಸದಳವು || ಪ || ಧವಳ ಹಿಮಾಲಯ ಮುಕುಟದ ಮೆರುಗು ಕಾಲ್ತೊಳೆಯುತಲಿದೆ ಜಲಧಿಯ ಬುರುಗು ಗಂಗಾ ಬಯಲಿದು ಹಸಿರಿನ ಸೆರಗು ಕಣಕಣ ಮಂಗಲವು ನಮ್ಮೀ ತಾಯ್ನೆಲವು      || 1 ||         ಕಾಶಮೀರದಲಿ ಸುರಿವುದು ತುಹಿನ ರಾಜಸ್ಥಾನದಿ ಸುಡುವುದು ಪುಲಿನ ಮಲಯಾಚಲದಲಿ ಗಂಧದ ಪವನ ವಿಧವಿಧ ಹೂ ಫಲವು ನಮ್ಮೀ ತಾಯ್ನೆಲವು     || […]

Read More