ಸಾವಿಗಂಜದ, ಸೋಲಿಗಳುಕದ ಸಿಡಿಲಿನಬ್ಬರ ಹೃದಯಕೆ ರಾಷ್ಟ್ರಭಕ್ತಿಯ ಗಂಗೆ ಹರಿಯಲಿ ಸ್ವಾರ್ಥವಿಲ್ಲದ ಜೀವಕೆ || ಪ || ಎದುರು ನಿಲ್ಲಲಿ ಕೋಟಿ ಶಕ್ತಿಯು ಹೊಸಕಿಹಾಕುವ ಬಲವಿದೆ ತಾಯಿ ಭಾರತಿ ಚರಣಕೆಮ್ಮಯ ರುಧಿರಗೈಯುವ ಛಲವಿದೆ || 1 || ರಾಷ್ಟ್ರನಿಷ್ಠರ ದಿವ್ಯ ಜೀವನ ಎಮ್ಮ ನಡಿಗೆಯ ಮುಂದಿದೆ ಹಿಂದೆ ಸರಿಯುವ ಮನಸೇ ಇಲ್ಲ ನಾಡ ಮೆರೆಸುವ ಕಾರ್ಯಕೆ || 2 || ತಿರುಚಿದಿತಿಹಾಸವನು ಬದಲಿಸಿ ಸತ್ಯ ಹಣತೆಯ ಬೆಳಗಿರಿ ಕ್ರಾಂತಿವೀರ ವಿವೇಕರೆದೆಯ ಕನಸು ನನಸುಗೊಳಿಸಿರಿ || 3 ||