ಜನನಿ ಭಾರತಿ ಜನ್ಮಧಾತ್ರಿ ದಿವ್ಯ ನಾಡಿದು ಸೋದರಿ ಬಾದರಾಯಣ ಪರಮ ಋಷಿಗಳ ಪುಣ್ಯ ಬೀಡಿದು ಸೋದರ || ಪ || ಎಲ್ಲಿ ರಾಮಾಯಣವು ಬೆಳಗಿತೊ ಎಲ್ಲಿ ಗೀತೆಯ ಸುಧೆಯು ಹರಿಯಿತೊ ವೇದ ಘೋಷಗಳಲ್ಲಿ ಮೊಳಗಿತೊ ಅದುವೆ ಭಾರತ ಸೋದರ ನಮ್ಮ ನಾಡಿದು ಸೋದರಿ || 1 || ಎಲ್ಲಿ ಮೋಹನ ಕೊಳಲನೂದಿದ ಎಲ್ಲಿ ಪರಶಿವ ನರ್ತಿಸಿದನು ವಾಣಿ ಲಕುಮಿ ಗೌರಿ ಗಣಪತಿ ಪೂಜೆಗೊಳ್ಳುವ ನಾಡಿದು ದೇವತೆಗಳಬೀಡಿದು || 2 || ಗಂಗೆ ಯಮುನೆ ತುಂಗಭದ್ರೆ ಸಿಂಧು ಮಹಾನದಿ […]
ದೂರ ತೀರದ ಶ್ವೇತ ಕುವರಿಗೆ ಏನು ಇಲ್ಲಿಯ ಚಿಂತನೆ ವೀರ ಸಂತ ವಿವೇಕ ಶೋಧನೆ ಎಂಥ ಅದ್ಭುತ ಕಲ್ಪನೆ || ಪ || ಹಿಂದು ಸಂಸ್ಕೃತಿಯವಳ ಉಸಿರು ಭರತ ಖಂಡಕೆ ಸೋದರಿ ದೀನ ದಲಿತರ ನೋಡುವಾ ಪರಿ ಎನಿತು ಕಾರ್ಯದ ವೈಖರಿ ಪುಟ್ಟ ಬಾಲೆಯರವಳಿಗಕ್ಕರೆ ಜ್ಞಾನ ಬೆಳಗಿದ ಭವ್ಯ ತಾರೆ ಸ್ತ್ರೀಗೆ ಶಿಕ್ಷಣ, ಸ್ವಾಭಿಮಾನವ ಸಾರಿ ಹೇಳಿದ ಶ್ವೇತ ಧಾರೆ || 1 || ಪ್ಲೇಗು ಮಾರಿ ಕಾಡಲಾಗ ಅಕ್ಕ ಆ ಕ್ಷಣ ಹಾಜರಿ ದುಃಖತಪ್ತರ ಕಣ್ಣ […]