ಸಿಂಧು ಸಂಸ್ಕೃತಿಯಲ್ಲಿ

ಸಿಂಧು ಸಂಸ್ಕೃತಿಯಲ್ಲಿ ಸಿರಿ ಪರಂಪರೆಯಲ್ಲಿ ಹಿಂದು ಹೆಸರಲಿ ನಾವು ಬಂದೆವಿಳೆಗೆ ಸಂದ ಕಾಲವನೆಳೆದು ಇಂದು ಯಶ ಸಾಧಿಸಲು ಬಂದಿಹುದು ಶುಭ ಸಮಯ ನಮ್ಮ ಬಳಿಗೆ || ಪ || ಒಡೆದು ಶಂಖಧ್ವನಿಯ ಗುಡುಗು ನೂರ್ಮಡಿಗೊಂಡು ಸಿಡಿಸಿಡಿದು ಸೀಳಾಗಿ ಸ್ವೀಕರಿಪ ಮೊದಲೇ ಬಡವ ಅಂತ್ಯಜರೆಂಬ ತಡೆಗೋಡೆಗಳು ಬೆಳೆದು ದುಡುಕಿ ವಿಷನಾಗಗಳು ಫೂತ್ಕರಿಪ ಮೊದಲೇ ಹುಡುಕಿ ಓರೋರ್‍ವರನು ನಿಜವಿಕಾಸಕೆ ತರಲು || 1 || ವಿಸ್ಮೃತಿಯ ಕರಿಮುಗಿಲು ಪ್ರಗತಿಪಥವನು ಕವಿದು ಪಶ್ಚಿಮಕೆ ಸೋತವರ ಅನುಸರಿಸದೇ ಆತ್ಮರತಿಯಲಿ ಮುಳುಗಿ ಆರ್ತರನು ಕಡೆಗಣಿಸಿ […]

Read More

ಬಿಂದು ಬಿಂದು ಒಂದುಗೂಡಿ ಸಿಂಧು ಎನಿಪುವಂತೆ

ಬಿಂದು ಬಿಂದು ಒಂದುಗೂಡಿ ಸಿಂಧು ಎನಿಪುವಂತೆ ನೂರು ಕೋಟಿ ಭಾರತೀಯರೊಂದುಗೂಡುವಂತೆ || ಪ || ಭಾಷೆ ವೇಷ ಕಲೆಯ ಬಲವು ಎದ್ದು ನಿಲ್ಲುವಂತೆ ಮಾನವತೆಯ ಹೃದಯದೊಲವ ಜಗಕೆ ಸಾರುವಂತೆ || 1 || ಧುಮ್ಮಿಕ್ಕುತ ಭೋರ್ಗರೆದಿದೆ ಭರತವರ್ಷ ಸಾಗರ ಎದೆ ಎದೆಯಲಿ ಝೇಂಕರಿಸಿದೆ ಭ್ರಾತೃತ್ವದ ಬಂಧುರ || 2 || ಕಣ ಕಣದಲಿ ಮಿಡಿಯುತಲಿದೆ ಶಾಂತಿಮಂತ್ರದಿಂಚರ ಭಾರತೀಯ ಮನುಜ ಮನವು ವಿಶ್ವಪ್ರೇಮದಾಗರ || 3 || ಆಗಸದಿಂದನವರತವು ಸುರಿವುದಿಲ್ಲಿ ಹೂಮಳೆ ಬೆಂದ ಹೃದಯದಾಳದಲ್ಲಿ ಬಂಧ ಬೆಸೆವುದೀ ಇಳೆ […]

Read More

ಸಿಂಧು ಸಾಗರದಿಂದ ಮಾರುತ

ಸಿಂಧುಸಾಗರದಿಂದ ಮಾರುತ ಬಂದು ಬಯಸುತ ಸ್ವಾಗತ ಹಿಂದುಹಿಂದುವು ಬನ್ನಿರಿಲ್ಲಿಗೆ ದೇವಸನ್ನಿಧಿಗೆನ್ನುತ || ಪ || ಪೂರ್ವದಿಕ್ಕಿನ ದ್ವಾರದ್ವಾರಕು ಹಸುರು ಘಟ್ಟದ ತೋರಣ ಕೆಳಗೆ ಪಶ್ಚಿಮ ತೀರದುದ್ದಕು ನೀಲವಾರಿಧಿಯಂಗಣ ನಡುವೆ ಅರಳಿದ ಬಾಳಸಂಪದವಿಲ್ಲಿ ಬಂಧುರ ಸುಂದರ ತಲೆಯ ತೂಗುವ ತಂಪನೆರೆಯುವ ತೆಂಗುಕಂಗಿನ ಹಂದರ || 1 || ವರುಷವೈದರ ಹಿಂದೆ ಶ್ರಾವಣ ಬಹುಳ ಅಷ್ಟಮಿ ಹಬ್ಬದ ದಿನವೆ ಜನಿಸಿತು ಭರದಿ ಬೆಳೆಯಿತು ವಿಶ್ವಹಿಂದೂಪರಿಷದ ತೀರ್ಥರಾಜ ಪ್ರಯಾಗ ಕ್ಷೇತ್ರದಿ ಕುಂಭಪರ್ವದಿ ಕಲೆಯುತ ವಿಶ್ವದಗಲಕು ಕುಡಿಯ ಚಾಚಿತು ಕುಡಿದು ತಾ ಧರ್ಮಾಮೃತ […]

Read More

ದಿವ್ಯದರ್ಶನ ಭಾಗ್ಯ ಬೆಳಗಿದೆ ಸಿಂಧು ಕಡಲಿನ

ದಿವ್ಯದರ್ಶನ ಭಾಗ್ಯ ಬೆಳಗಿದೆ ಸಿಂಧು ಕಡಲಿನ ತೀರದಲ್ಲಿ || ಪ || ಗಂಗೆ ನಿಲ್ಲದು ತುಂಗೆ ನಿಲ್ಲದು ಸಾಗರದ ಗುರಿ ಸೇರುವನಕ ಜೀವನದ ನದಿ ನಿಲ್ಲಲಾಗದು ಗುರಿಯ ಸಾಗರ ಸೇರುವನಕ ಜೀವತಳೆದೇಳೇಳಿ ಧಾವಿಸಿ ಕಾರ್ಯ ಸಫಲತೆ ಕಾಣುವನಕ ಸ್ಥೈರ್ಯ ಸ್ಫೂರ್ತಿಯ ಅಮರಧಾರೆಯ ಸೃಜಿಸಿ ಪ್ರವಹಿಸಿ ನಾಡಲಿ || 1 || ಜಡ ಸಮಾಜಕೆ ಜೀವ ನೀಡುವ ಜಾಗೃತಿಯ ಹೂಂಕಾರ ಹೊರಡಿಸಿ ಮುನ್ನಡೆವ ವಿಜಗೀಷು ವೃತ್ತಿಯ ಕಹಳೆ ಎತ್ತುತೆ ನಭಕೆ ಮೊಳಗಿಸಿ ಯುವಜನಕೆ ಯುವ ಮನವ ಜೋಡಿಸಿ ಮನದಿ […]

Read More