ಹರಸಿ ಧರೆಗವತರಿಸಿದೋ ಸಿಡಿಲಾಳು ಮಾನವ ಕೇಶವ ಆಳು ಶ್ವಾಸವನಾಳು ಹೃದಯವ ಸ್ಪರ್ಶಿಸಿದೊ ಸರ್ವಸ್ವವ || ಪ || ಕಲಿಬಲೋನ್ನತ ನೆಲದ ಯುವಕುಲವಿರಲು ದಾರಿಯೆ ತೋರದೆ ಧ್ಯೇಯದೇಗುಲ ತೆರೆದು ಬಾಗಿಲ ಕರೆದ ಕರದೊಳು ಹರಿದಿದೆ ನಿನ್ನ ಜೀವನದಮರ ಧಾರೆಯ ಅರುಣವಾರಿಯ ಹನಿಹನಿ ಯೋಧಹೃದಯದ ಧರೆಯ ಹರೆಯಕೆ ಪ್ರಖರತರ ಸಂಜೀವಿನಿ || 1 || ಹೋಮಧೂಮದ ತಪೋಧಾಮದ ಯೋಗ ಯಾಗದ ತಪಸಿಗೆ ಸಾರ್ಥಕತೆ ತಂದೀವ ಮಂತ್ರವ ಕಥಿಸಿ ಕೃತಿಸಿದ ಕೀರ್ತಿಗೆ ಶತಕವಿದರೊಳು […]