ಶತಮಾನದ ಶುಭ ಆಶಯದೆಡೆಗೆ ದಶಮಾನದ ಅಭಿಮಾನದ ನಡಿಗೆ ಉರುಳಿತು ಭರದಲಿ ಕಾಲಚಕ್ರ ಮೊಳಗಿತು ಎಲ್ಲೆಡೆ ಸೇವೆಯ ಮಂತ್ರ ಲೋಕಹಿತಂ ಮಮ ಕರಣೀಯಮ್ || ಪ || ಪಶ್ಚಿಮ ಜಲಧಿಯ ಲಕ್ಷಲಹರಿಗಳು ನಿಶ್ಚಲವಾಗುವುದುಂಟೇನು ? ಅಕ್ಷಯ ಸ್ಪೂರ್ತಿಯ ಯುವಜನಶಕ್ತಿಯು ನಿಷ್ಪಲವಾಗುವುದುಂಟೇನು ? ಮೊರೆಯಿತು ಧ್ಯೇಯದ ಭವ್ಯ ಸಮುದ್ರ ಮೊಳಗಿತು ಎಲ್ಲೆಡೆ… || 1 || ತೊಟ್ಟಿಲ ತೂಗುವ ಕೋಮಲಕರಗಳು ಕಟ್ಟಲು ಬಲ್ಲವು ರಾಷ್ಟ್ರವನು ಕಟ್ಟಿದ ಅಬಲೆಯ ಪಟ್ಟವ ಕಳಚಿ ಮುಟ್ಟಲು ಬಲ್ಲವು ಲಕ್ಷ್ಯವನು ಸಾರುತ ನಾರಿಯ ನೂತನ ಪಾತ್ರ […]
ಬಂದಿಹುದು ಶುಭ ಗಳಿಗೆ, ಪರಿವರ್ತನೆಯ ಕಡೆಗೆ ಕೃತಿರೂಪದಾರತಿಯ ಬೆಳಗ ಬನ್ನಿ || ಪ || ಸ್ವಾರ್ಥಲಾಲಸೆ ದಿಗಿಲು, ತ್ಯಾಗಸೇವೆಯೆ ಮಿಗಿಲು ಕೊರತೆ ಕಲುಷವ ನೀಗಿ, ಸಾಮರಸ್ಯದಿ ಸಾಗಿ ನೆಮ್ಮದಿಯ ಬಾಳ ಬಗೆ ಬರಲಿ ಇಳೆಗೆ ಕೃತಿರೂಪದಾರತಿಯ ನಾವು ಬೆಳಗೆ || 1 || ವಿಕೃತಿಯು ವಿಭ್ರಮಿಸಿ, ಸಂಸ್ಕೃತಿಯ ಹದಗೆಡಿಸಿ ಮನೆಮನೆಯ ಮನಮನವ, ಬೆಸೆವ ಬಂಧುರ ಭಾವ ಪರಿವಾರದಾಧಾರ ದೇಶಕಾಧಾರ ಕೃತಿರೂಪದಾರತಿಯ ನೈಜ ಸಾಕಾರ || 2 || ಸುಖದಾಹ ಮಿತಿಮೀರಿ, ಭೂರಮೆಗೆ ಒಡಲ ಉರಿ ಜಲ ವಾಯು […]