ಶೌರ್ಯ ಬಿತ್ತಿ ಬೆಳೆದ ಧನ್ಯ ವಿಶ್ವವಂದ್ಯೆ ಭಾರತಮಾತೆ ಕಾರ್ಯಶೀಲರಾಗುವಂತೆ ಹರಸು ನಮ್ಮನು ಅರಿಗಳಿಗೆ ದುರ್ಗೆಯಾಗಿ ಆರ್ತರಳಲ ತೊಡೆದ ತಾಯಿ ಧ್ಯೇಯ ಪಥದಿ ಸಾಗುವಂತೆ ಹರಸು ನಮ್ಮನು || ಪ || ವರ್ತಮಾನವಳಿಸಿಕೊಂಡು ಶೈತ್ಯ ಧಗೆಗೆ ಒಗ್ಗಿಕೊಂಡು ಹೊರಗೂ ಒಳಗೂ ಕಾಯುತಿರುವ ವೀರ ಯೋಧರು ಪೊರೆದು ಕಾಯ್ವ ವೀರರನ್ನು ಹೆಮ್ಮೆಯಿಂದ ವಿರತ ಸ್ಮರಿಸಿ ಹೃದಯವಂತರಾಗುವಂತೆ ಹರಸು ನಮ್ಮನು || 1 || ಒಡಕಿನಿಂದ ತೊಡಕು ಸಹಜ ಐಕ್ಯಮತ್ಯದಿಂದ ವಿಜಯ ಕೂಡಿ ಬಾಳ್ವ ಪರಿಯ ಕಲಿಸಿ ಹರಸು ನಮ್ಮನು ಸಗ್ಗ […]
ಮಾತೆ ನಿನ್ನಯ ದಿವ್ಯ ಚರಣಕೆ ನಮ್ಮ ಕಾಯವು ಬೀಳಲಿ ಶೌರ್ಯ… ತ್ಯಾಗದ ಸಂಗಮದಲಿ ಜಗದ ಉನ್ನತಿಯಾಗಲಿ ವಿಶ್ವವೇ ತಲೆಬಾಗಲಿ… || ಪ || ದೇಶಭಕ್ತಿಯು ಪ್ರಕಟವಾಗಲಿ ತೊರೆದು ಮನಸಿನ ಆಮಿಷ ತೋಳಶಕ್ತಿ ಬಲಾಢ್ಯವಾಗಲಿ ವ್ಯಕ್ತವಾಗುತ ಪೌರುಷ ವೀರತನವಿದು ದೇಶಕೋಸ್ಕರ, ಹಾರಿ ಮುಟ್ಟಲು ಆಗಸ ವೈರಿ ನಾಶದಿ ಸಂತಸ… || 1 || ನಮ್ಮ ಹಿರಿಯರ ಕನಸಿನಂತೆ ಭಾರತಿಯು ತಲೆಯೆತ್ತಲಿ ಕಡಲ ಅಲೆಗಳ ಓಟದಂತೆ ದೇಶಕಾರ್ಯವು ಸಾಗಲಿ ಹಿಂದು ಕಲಿಗಳ ಶಕ್ತಿಯಿಂದ ಶತ್ರು ಕಾಯವು ಬೀಳಲಿ ಅಂಧಕಾರವು ತೊಲಗಲಿ… […]
ಸಾಗು ಮುಂದೆ ಸಾಗು ಮುಂದೆ ಭಾರತದ ಸಿಪಾಯಿಯೇ ಧೈರ್ಯ ಶೌರ್ಯ ಮೂಡಿಬರಲಿ, ಹರಸಿ ಕಳುಹು ತಾಯಿಯೇ || ಪ || ಅಡಿಯ ಮುಂದೆ ಇಡಲು ಸ್ವರ್ಗ, ಹಿಂದೆ ಘೋರ ನರಕವು ಹೆತ್ತ ಒಡಲ ಋಣವ ಸಲಿಸಲಿಂದು ಬಂದ ಭಾಗ್ಯವು ಹಾಡು ಸಮರಗೀತೆಯ ನೆನೆಯೊ ವೀರಗಾಥೆಯ ಭಾರತಿಗೆ ಜೈ, ಭಾರತಿಗೆ ಆರತಿಯು ಜೈ ಜೈ ಜೈ || 1 || ದೇಶಭಕ್ತಿ ಉಕ್ಕಿ ಹರಿದು ರಕ್ತ ಬೆಚ್ಚಗಾಗಲಿ ಕೊರೆವ ಹಿಮದ ರಾಶಿಯಲ್ಲು ಮೈಯ ಛಳಿಯು […]