ಶತಶತಮಾನದ ಕನಸಿನ ಬಿತ್ತು ಹೊಸಬೆಳಕಿಗೆ ಕಣ್ದೆರೆಯುವ ಹೊತ್ತು ಪಲ್ಲವಿಸಲಿ ಸಂವರ್ಧಿತವಾಗಲಿ ನೆತ್ತರು ಬೆವರಿನಲಿ – ಸಾಹಸ ಚರಿತದಲಿ || ಪ || ಮಳಲನು ಸುರಿಯಲಿ ಅಳಿಲಿನ ಭಕ್ತಿ ಶಿಲೆ ಬಂಡೆಗಳನು ಹನುಮನ ಶಕ್ತಿ ಜಲಧಿಗೆ ಸೇತುವೆ ಅಳಿಯದ ಕೀರ್ತಿ ಒಲಿವುದು ಪರದೈವ – ಸಲಿಸಲು ಕರ್ತವ್ಯ || 1 || ಹಿಗ್ಗದೆ ಜಯಹಾರಕೆ ಹೊಗಳಿಕೆಗೆ ಕುಗ್ಗದೆ ಸೋಲಿಗೆ ನಿಂದೆಯ ನುಡಿಗೆ ಒಗ್ಗುತ ಸಂಘದ ರೀತಿಗೆ ನೀತಿಗೆ ಅರ್ಪಿತವೆನ್ನೋಣ – ತನು ಮನ ಧನ ಪ್ರಾಣ || 2 […]
ಹಿಂದುತ್ವದ ಒಡಲಾಳದ ಬೆಂಕಿಯೆ ಜಡತೆಯ ತೊರೆದು ಸಿಡಿದೇಳು ಶತಶತಮಾನದ ಕಡು ಅಪಮಾನದ ಅವಶೇಷಂಗಳ ದಹಿಸೇಳು… ಮುಗಿಲನು ಚುಂಬಿಸಿ ಭುಗಿಲೇಳು ಸತ್ಯಮೇವ ಜಯತೇ… ಶೌರ್ಯಮೇವ ಜಯತೇ || ಪ || ನಿನ್ನಯ ಪೌರುಷಮಯ ಇತಿಹಾಸ ಸ್ಮರಿಸದೆ ಮೈಮರೆತಿದೆ ಈ ದೇಶ ಪ್ರಕಟಗೊಳ್ಳು ನೀ ಪ್ರಜ್ವಲಿಸುತಲಿ ಬೆಳಗಲಿ ಭುವಿ ತವ ಪ್ರಖರ ಪ್ರಕಾಶ || 1 || ತುಷ್ಟೀಕರಣವ ಪುಷ್ಟೀಕರಿಸುವ ತಾರತಮ್ಯಯುತ ಧೋರಣೆಯು ಕಪಟ ಮತಾಂತರ ಕುಟಿಲ ಅವಾಂತರ ರಾಷ್ಟಾಂತರಕಿದು ಪ್ರೇರಣೆಯು || 2 || ಸಂಘ ಶಕ್ತಿಯ ನೀ […]
ಶತಶತಮಾನದ ಕಲುಷವ ಗುಡಿಸುತ ಬನ್ನಿ ತಾಯ ಉಡಿಗೇ ಹಿಂದುತ್ವದಲಿ ಬಂಧುತ್ವದಲಿ ಒಂದಾಗಿ ಸಾಗಿ ಗುಡಿಗೆ || ಪ || ತೊಲಗಿಸಿ ತರತಮ ದೋಷ, ಮೊಳಗಿಸಿ ಸಮತೆಯ ಘೋಷ ನಮ್ಮೊಳಗಿಲ್ಲವು ಭೇದ, ಆಗದು ಗೆಳೆತನ ಛೇದ ದೈನ್ಯತೆ ಮಲಿನತೆ ನೀಗುತ ನಡೆವೆವು ನಮಿಸಿ ತಾಯ ಅಡಿಗೇ ಪದ ಜೋಡಿಸುತ ಭುಜಗೂಡಿಸುತ ಒಂದಾಗಿ ಸಾಗಿ ಗುಡಿಗೆ || 1 || ಕುಡಿಯುವ ಎದೆಹಾಲೊಂದೇ, ನುಡಿಯುವ ಸವಿಮಾತೊಂದೇ ಪುಂಗವ ಪುರುಷರ ಆಂಶ, ನಮ್ಮದು ಋಷಿಮುನಿ ವಂಶ ಮಾತೆಯ ವೈಭವ ಸಾಧನೆಗಾಗಿ ಒಂದುಗೂಡಿ […]