ಮಾಧವ ನಿನ್ನಯ ಆದರ್ಶಗಳೆ ಬಾಳಿಗೆ ಸೋಪಾನ ಭೇದವ ಮರೆಸುವ ಆದೇಶಗಳೆ ಸ್ಫೂರ್ತಿಯ ಸಂಚಲನ ಸಾಧನೆ ತೋರಿ ಮಾಡಿದೆಯಂದು ಸಂತರ ಸಮ್ಮಿಲನ ಸಾಧಕ ಪುರುಷನೆ ಯುಗ ದ್ರಷ್ಟಾರನೆ ಗೈವೆವು ಶತನಮನ || ಪ || ಕೇಶವ ನೆಟ್ಟಿಹ ವೃಕ್ಷದ ಪಾಲನೆ ಪೋಷಣೆ ನೀ ಗೈದೆ ಕ್ಲೇಶವನೆಣಿಸದೆ ಸಂಘದ ಕಾರ್ಯಕ್ಕೆ ರಭಸವ ನೀ ತಂದೆ ಶೋಷಿತ ಜನತೆಗೆ ಪ್ರೀತಿಯ ಸುಧೆಯನು ಅನುದಿನ ನೀನೆರೆದೆ ಆಸರೆ ನೀಡುತ ವನವಾಸಿಗಳ ಬಾಳಿಗೆ ಬೆಳಕಾದೆ || 1 || ಅಮ್ಮನ ಮರೆಯುವ ನಮ್ಮಯ ತರುಣರ […]