ಶತಮಾನದ ಶುಭ ಆಶಯದೆಡೆಗೆ ದಶಮಾನದ ಅಭಿಮಾನದ ನಡಿಗೆ ಉರುಳಿತು ಭರದಲಿ ಕಾಲಚಕ್ರ ಮೊಳಗಿತು ಎಲ್ಲೆಡೆ ಸೇವೆಯ ಮಂತ್ರ ಲೋಕಹಿತಂ ಮಮ ಕರಣೀಯಮ್ || ಪ || ಪಶ್ಚಿಮ ಜಲಧಿಯ ಲಕ್ಷಲಹರಿಗಳು ನಿಶ್ಚಲವಾಗುವುದುಂಟೇನು ? ಅಕ್ಷಯ ಸ್ಪೂರ್ತಿಯ ಯುವಜನಶಕ್ತಿಯು ನಿಷ್ಪಲವಾಗುವುದುಂಟೇನು ? ಮೊರೆಯಿತು ಧ್ಯೇಯದ ಭವ್ಯ ಸಮುದ್ರ ಮೊಳಗಿತು ಎಲ್ಲೆಡೆ… || 1 || ತೊಟ್ಟಿಲ ತೂಗುವ ಕೋಮಲಕರಗಳು ಕಟ್ಟಲು ಬಲ್ಲವು ರಾಷ್ಟ್ರವನು ಕಟ್ಟಿದ ಅಬಲೆಯ ಪಟ್ಟವ ಕಳಚಿ ಮುಟ್ಟಲು ಬಲ್ಲವು ಲಕ್ಷ್ಯವನು ಸಾರುತ ನಾರಿಯ ನೂತನ ಪಾತ್ರ […]
ಶತಶತಮಾನದ ಜಯಜಯಗಾನದ ಯಶ ಸಮ್ಮಾನದ ಪ್ರಹರಿ ಹೃದಯಾಕಾಶದ ಉದಯಾನಲ ಭಗವಾ ವಿಜಯವಿಹಾರಿ || ಪ || ದಿನ ದಿನದರುಣೋದಯ ರಾಗದೊಳು, ನಾಡಿಗೆ ನಡೆದಿಹ ತಪ ತ್ಯಾಗದೊಳು, ಸಿಂಧೂ ತೀರದ ಶತಯಾಗದೊಳು ಘೋಷಿತಗೊಳುತಿದೆ ದೇಶದಲಿ, ಜ್ವಾಲಾಜಿಹ್ವೆಯ ಘನಗಂಭೀರ ಸ್ವರ ಬಾಳಿನ ಗುರಿ ಬಿತ್ತರಿಸುತಲಿ ಬಾನೆತ್ತರಕೇರಿದೆ ಭಗವಾ ಪ್ರಖರ || 1 || ದಿವ್ಯ ತಪೋವನದಾಧಾರ ಧನ, ನೃಪ ಪೀಠಂಗಳ ಚೇತನ ಪ್ರಾಣ, ತವ ದಕ್ಷಿಣಾ ತನು ಮನ ಧನ ಪ್ರಾಣ ರಾಷ್ಟ್ರಾರ್ಚನೆಗರಳುತಲಿರಲಿ, ಭೂಮಾತೆಯ ಒಡಲೀಯುವ ಬಹು ಜನುಮ ಪಾವನ […]
ಹೊಸಮಾನದ ಶತಮಾನದ ಹಾಡು ಮಾರ್ದನಿಸುತಲಿದೆ ದೆಸೆದೆಸೆಗೆ ಮಾನವತೆಗೆ ಹಿಂದುತ್ವವೆ ಶಿರ ಏರುತ ಬಾ ಹೊಸ ಸಾಧನೆಗೆ ಹಿಂದೂ ಧರ್ಮಾರಾಧನೆಗೆ || ಪ || ಋಷಿಗಳ ಉಸಿರಲಿ ಸತ್ಯವೆ ಬದುಕು ದೊರೆವುದರಿವು ಬೆಳಕು ನಶಿಸಲಿ ನಡೆಯಲಿ ವಿರಸದ ಪಲುಕು ಸಮರಸತೆಯ ಬದುಕು ಸಂಗಚ್ಛಧ್ವಂ ಮಂತ್ರದ ಧ್ವನಿಯು ಮಾರ್ದನಿಸುತಲಿದೆ ದೆಸೆದೆಸೆಗೆ ಮಾನವತೆಗೆ ಹಿಂದುತ್ವವೆ ಶಿಖರ ಏರುತ ಬಾ ಹೊಸ ಸಾಧನೆಗೆ ಹಿಂದೂ ಧರ್ಮದಾರಾಧನೆಗೆ || 1 ||
ಭಾರತದ ಆಗಸದಿ ನವಸೂರ್ಯೋದಯವಾಗುತಿದೆ ಶತಶತಮಾನದ ದೈನ್ಯವನಳಿಸುತ ನವ ಜೀವನ ಪ್ರಭೆ ಮೂಡುತಿದೆ || ಪ || ರೂಢಿಯ ಜಡತೆಯ ಬಂಧನ ಕಳಚುತ ನವೋತ್ಸಾಹ ನವ ಸ್ಫೂರ್ತಿಯನೆರೆಯುತ ಮಸಣದ ಶೂನ್ಯದಿ ಸಾಸಿರ ಸುಮಗಳ ನವ ನಂದನ ಸಜ್ಜಾಗುತಿದೆ || 1 || ತ್ಯಾಗ ತಪೋಮಯ ಋಷಿ ಮುನಿ ಜೀವನ ಸಾಹಸ ಚೈತ್ರದ ಕ್ಷಾತ್ರೋತ್ಸ್ಫುರಣ ಶೀಲದ ಶೌರ್ಯದ ಆರಾಧನೆಯಲಿ ನಾಡಿದು ತನ್ಮಯವಾಗುತಿದೆ || 2 || ಬಿಂದುವು ಸಿಂಧುತ್ವಕೆ ತಾನೆಳೆಸಲು ಕಳೆಯದೆ ಹಿಂದುತ್ವದ ಬಿರಿಯಳಲು ಬಾನ್ಧರೆ ಬೆಸೆಯುವ ಮಹದಾಕಾಂಕ್ಷೆಯ ಸಂಘ […]