ಕಾರ್ಯಕ್ಷೇತ್ರದ ಕರೆಗೆ ಬಂಧುಗಳೇ ಓಗೊಡುವಾ | ಸೇವೆಯ ಸತ್ಪಥದಲ್ಲಿ ಹೆಜ್ಜೆಯ ಮುಂದಕೆ ಇಡುವಾ || ಪ || ಬಂದರು ನೂರು ಸವಾಲು ಎದೆಗುಂದದೆ ಸ್ವೀಕರಿಸಿ ಧೈರ್ಯದಿ ಮುನ್ನಡೆಯೋಣ ಧ್ಯೇಯದ ದೀಪವ ಧರಿಸಿ || 1 || ಶತವಿಧ ಭೇದವನಳಿಸಿ ಸಮತೆಯ ಭಾವವ ಬೆಳೆಸಿ ಸಮರಸತೆಯ ಸುಧೆಯುಣಿಸಿ ಸ್ವರ್ಗವನೇ ಧರೆಗಿಳಿಸಿ || 2 || ಸುರವಾಣಿಯ ಸವಿಜೇನು ಸರಿಸಾಟಿಯು ಇಹುದೇನು? ಯೋಗದ ಘನ ಸಹಯೋಗ ಮೈಮನಕೆ ಹಿತ ತಾನು || 3 || ವ್ಯರ್ಥವು ಬರಿ ಉಪದೇಶ ಸಾರ್ಥಕ […]
ಕಾಯಾವಾಚಾ ಮನಸಾ ಮಾತೆಯ ಸೇವೆಯ ಮಾಡುವೆವು | ನಮ್ಮಯ ಕೊನೆಯುಸಿರಿರುವನಕ ನಾಡಿಗಾಗಿ ಹೋರಾಡುವೆವು | ನಾಡಿಗಾಗಿಯೇ ದುಡಿಯುವೆವು ನಾಡಿಗಾಗಿಯೇ ಮಡಿಯುವೆವು || ಪ || ಇಲ್ಲಿದೆ ಬಾಳಿನ ನೂತನ ಅರ್ಥ ಸುಮ್ಮನೆ ಕಳೆಯದೆ ದಿನಗಳ ವ್ಯರ್ಥ ಕಾರ್ಯಕ್ಷೇತ್ರಕೆ ಧುಮುಕುವೆವು ಬಿಡುವಿಲ್ಲದೆ ಪರಿಶ್ರಮಿಸುವೆವು || 1 || ನಮ್ಮಯ ಹಿರಿಯರು ತೋರಿದ ಹಾದಿ ಸಾಧನೆಗದುವೇ ಭದ್ರಬುನಾದಿ ವಿಘ್ನ ವಿರೋಧವ ಮೆಟ್ಟುವೆವು ಭವ್ಯ ಸಮಾಜವ ಕಟ್ಟುವೆವು || 2 || ಗ್ರಾಮ ನಗರ ಗಿರಿಕಾನನಗಳಲಿ ಸೇವಾವ್ರತಿಗಳ ಪಡೆಯು ಚಲಿಸಲಿ ಸ್ನೇಹದೊಳೆಲ್ಲರ […]
ಸೇವೆಯ ಸಾಧಕರಾಗೋಣ ಜೀವನ ಸಾರ್ಥಕಗೊಳಿಸೋಣ ಸೇವಾ ಹಿ ಪರಮೋ ಧರ್ಮಃ | ಸೇವಾ ಹಿ ಪರಮೋ ಧರ್ಮಃ || ಪ || ನೆಲದಲಿ ಜಲದಲಿ ಜಡಚೇತನದಲಿ ನೆಲೆಸಿಹುದೆಲ್ಲೆಡೆ ದೈವಾಂಶ ಫಲವನು ಬಯಸದೆ ಸೇವೆಯ ಗೈಯಲು ಸುಲಭವು ಸಾತ್ವಿಕ ಸಂತೋಷ ಈಶಾವಾಸ್ಯಮಿದಂ ಸರ್ವಂ | ಈಶಾವಾಸ್ಯಮಿದಂ ಸರ್ವಂ || 1 || ದೊರೆಯಲಿ ಹಸಿದವರೆಲ್ಲರಿಗನ್ನ ಆಸರೆ ಶಿಕ್ಷಣ ಆರೋಗ್ಯ ಸರಿಸಮ ಗೌರವ ಸ್ವಾವಲಂಬನ ಸಮರಸ ಬಾಳಿನ ಸೌಭಾಗ್ಯ ಸರ್ವೇ ಭವಂತು ಸುಖಿನಃ | ಸರ್ವೇ ಸಂತು ನಿರಾಮಯಾಃ || […]
ಸೇವೆಯ ಸೇತುವೆ ಕಟ್ಟಲು ಬನ್ನಿ ವ್ಯಕ್ತಿ ಸಮಾಜದ ನಡುವೆ ನಾಡದೇವತೆಗೆ ಅರ್ಪಿಸಬನ್ನಿ ತನುಮನಧನಗಳ ಒಡವೆ || ಪ || ಸೇವೆಯೆ ತತ್ವದ ಸಾರವು ನಿಜದಿ ಸೇವೆಯೆ ಜೀವನ ಧರ್ಮ ಸ್ವಾರ್ಥದುರಾಶೆಯ ನೀಗಿಸಿ ಬಾಳನು ಸಾರ್ಥಕಗೊಳಿಸುವ ಮರ್ಮ ಕಂಗೆಡಿಸುವ ಕಗ್ಗತ್ತಲಕೂಪದಿ ಸೇವೆಯೆ ದಾರಿದೀಪ ದುಃಖಿತ ಜನತೆಯ ಕಂಬನಿಯೊರೆಸುವ ಕರುಣೆಯ ಮಾತೃಸ್ವರೂಪ || 1 || ಅಕ್ಷರವಿದ್ಯೆಯ ಕಲಿಸಿ ನಿರಕ್ಷುರಕುಕ್ಷಿಗಳಿಗೆ ಒಲವಿಂದ ಅಕ್ಷಯ ರಕ್ಷಣೆ ನೀಡುತ ಶೋಷಿತ ಜನತೆಗೆ ಛಲಬಲದಿಂದ ಕಾರ್ಪಣ್ಯದ ಘಟಸರ್ಪದ ದರ್ಪವ ಮುರಿಯಲು ಸೇವೆಯೆ ಮಾರ್ಗ ತ್ಯಾಗ […]