ವ್ರತವ ತೊಡುವ ಬನ್ನಿ

ವ್ರತವ ತೊಡುವ ಬನ್ನಿ ಸೇವಾ ವ್ರತವ ತೊಡುವ ಬನ್ನಿ || ಪ || ಹೃದಯ ಹೃದಯಕೆ ಬೆಸುಗೆಯ ಹಾಕುವ ಅಸ್ಥಿರ ಬದುಕನು ಸಾರ್ಥಕಗೊಳಿಸುವ ನೊಂದು ಬೆಂದವರ ತೊಂದರೆ ನೀಗುವ ಎಲ್ಲೆಡೆ ಸ್ನೇಹದ ಲತೆಯನು ಬೆಳೆಸುವ || 1 || ಉನ್ನತ ಪದವಿಯ ಗೊಂದಲವಿಲ್ಲ ಧನಕನಕವೇ ಇಲ್ಲಿ ಪ್ರಧಾನವಲ್ಲ ಜಾತಿ ವರ್ಣವನು ಕೇಳುವುದಿಲ್ಲ ರೂಪಕೆ ಧೂಪವ ಹಾಕುವುದಿಲ್ಲ || 2 || ಅಂತರಂಗದಾ ಸಿರಿ ಹೊಂದಿರಬೇಕು ಅಂತರ ತೋರದ ಆಂತರ್ಯ ಬೇಕು ನಾನೆಂಬುದನು ಕಡೆಗಾಣ ಸಬೇಕು ತನುಮನದಲಿ ಬಲವುಕ್ಕಲೇ […]

Read More

ಬಡತನದ ಬೇಗೆಯಲಿ

ಬಡತನದ ಬೇಗೆಯಲಿ ಬೇಯುತಿಹ ಬಂಧುಗಳ ಬಾಳಿನಲಿ ಬೆಳದಿಂಗಳೆನಿಸಬೇಕು ಭಾರತೀಯರ ಭಾವ ಭಿನ್ನತೆಯ ಬದಿಸರಿಸಿ ಬಂಧು ಭಾವದೊಳವರ ಬೆಸೆಯಬೇಕು || ಪ || ಬವಣೆ,ಬೇಗುದಿಯಳಿಸಿ, ಬೇನೆ, ಬೇಸರವಳಿಸಿ ಬಧಿರತನದುರುಳಿಂದ ಬೇರ್ಪಡಿಸಬೇಕು ಬಡಿವಾರ ಬದಿಗಿರಿಸಿ ಬಂಧುಗಳ ಬರಸಳೆದು ಬಿಗಿದಪ್ಪಿ ಭಾವಗಳ ಬೆಸೆಯಬೇಕು || 1 || ಬೆಳಕಿನೆಡೆ ಬರಮಾಡಿ ಬಲದೊಲವನೀಯುತ್ತ ಭರವಸೆಯ ಬೀಜವನು ಬಿತ್ತಬೇಕು ಬಡವ ಬಲ್ಲಿದರೆಂಬ ಭೇದ ಬದನಿಕೆಯಳಿಸಿ ಭಾರತದ ಬೇರುಗಳ ಬೆಳೆಸಬೇಕು || 2 || ಬವರದಲಿ ಬಲಿದಾನವಾಂತವರ ಬಯಕೆಯೊಲು ಭವ್ಯ ಭಾರತವನ್ನು ಬಲಿಯಬೇಕು ಭೂಮಾತೆಯಣುಗರಲಿ ಭೂಮಿ […]

Read More