ಸಾಸಿರ ಸಾಸಿರ ಕಂಠಗಳಿಂದ ಹೊಮ್ಮುತಿಹ ಸ್ವರ ಒಂದೇ | ಭಾರತಭೂಮಿಯ ವೀರಸುಪುತ್ರರ ಧ್ಯೇಯಾದರ್ಶವು ಒಂದೇ | ಜಗದ ಜನನಿಯ ಜಯಜಯಗಾನ… ಹಿಂದೂರಾಷ್ಟ್ರದ ಪುನರುತ್ಥಾನ || ಪ || ಗಿರಿಪರ್ವತಗಳ ಶೃಂಗಗಳಿಂದ ಗುಡಿಗೋಪುರಗಳ ಶಿಖರಗಳಿಂದ ಶತವಾಹಿನಿಯರ ಲಹರಿಗಳಿಂದ ಮಾರ್ದನಿಸುತಲಿದೆ ಜಯಘೋಷ… ನವಚೈತನ್ಯದ ಸಂದೇಶ || 1 || ಸಾಸಿರ ಲಕ್ಷದ ಲಕ್ಷ್ಯವ ದಾಟಿ ಕೋಟಿ ಹೃದಯಗಳ ತಂತಿಯ ಮೀಟಿ ಲಂಘಿಸಿ ಕ್ಷಿತಿಜದ ದುರ್ಗಮ ಗಡಿಯ ಸ್ಥಾಪಿಸಿ ನೂತನ ವಿಕ್ರಮವ… ಸಾಧಿಸಿ ಗೆಲುವಿನ ಸಂಭ್ರಮವ || 2 || ಸುತ್ತಲು […]
ಸಿಡಿಲೆರಗಿದರೂ ಬಂದೊದಗಿದರೂ ಕಡು ಭೀಕರ ಅಗ್ನಿ ಪರೀಕ್ಷೆ ಸಾಸಿರ ವಿಜಯದ ಭುಜಕೀರ್ತಿಯ ಜೊತೆ ಮನತೊಡುವುದೇ ಸೈ ಮರುದೀಕ್ಷೆ || ಪ || ನೆಲೆದೆದೆಯಾಳದ ಪ್ರಬಲ ಪ್ರವಾಹದ ಬುಗ್ಗೆಯಿದೋ ರಮ್ಯ ಅದಮ್ಯ ದೌಷ್ಟ್ಯಕೆ ದಮನಕೆ ಕುಗ್ಗದು ಚೇತನ, ಮನದೆಲ್ಲೆಯು ಕೋವಿಗಗಮ್ಯ || 1 || ಹನಿನೆತ್ತರು ಬಿದ್ದೆಡೆ ಹತ್ತಾಗುತ ಸತ್ತೆಡೆಸಾವಿರವಾಗುತಲಿ ತನುವೆತ್ತುವೆವೊ ತಲೆಯೆತ್ತುವೆವೊ ಮಣ್ಣಿನೊಳೆ ಹೊನ್ನಾಗುತಲಿ || 2 || ತಕ್ಷಕ ದಂಶಕೆ ಮಡಿದಶ್ವತ್ಥದ ಹಿಡಿಬೂದಿಯನಭಿಮಂತ್ರಿಸುತ ತಕ್ಷಣ ವೃಕ್ಷವ ಚಿಗುರಿಸುವುದೆ ಸೈ, ಅಶ್ವಿನಿಯರನಾಮಂತ್ರಿಸುತ || 3 ||
ಸಾಸಿರ ಪದಯುಗ ಸಾಸಿರನೇತ್ರ ಸಾಸಿರ ಸಾಸಿರ ಶೀರ್ಷಾ ಸಾಕ್ಷಾತ್ಕರಿಸಿದೆ ಅಭಂಗ ಏಕತೆ ಸಮರಸತೆಯ ಸಂದೇಶ ವ್ಯಾಪಿಸಿ ವಿಶ್ವದ ತಲೆ ಎತ್ತಿಹ ಹೇ ಅಸೀಮ ಸಮಾಜ ಪುರುಷ || ಪ || ಎಲ್ಲಿದೆ ತರತಮ ಜಾತಿನೀತಿ ಕುಲ ಎಲ್ಲಿದೆ ಎಲ್ಲಿದೆ ಭಿನ್ನಮತ ಹಿಂದುತ್ವದಿ ನಿಜ ಬಾಂಧವರೆನಿಸಲು ಇಲ್ಲಿದೆ ಇಲ್ಲಿದೆ ಕರ್ಮಪಥ || 1 || ಸೃಷ್ಟಿಗೆ ಗೋಚರ ನವ ಮನ್ವಂತರ ಸೃಷ್ಟಿ ಸಿದ್ದಿಯ ಮಾರ್ಗಕೆ ಉದಯಿಸಿತೋ ಶಿವಶಕ್ತಿ ಸಕಲ ಜೀವಕುಲ ಸುಖವ ಕಾಣಲಿದೆ ಪ್ರಕೃತಿಗೆ ಮರು ವಿಶ್ವಾಸ || […]