ಏಕತೆ ಸಾರುವ ಸೂತ್ರದಿ ಸೇರುವ ಬನ್ನಿರಿ ಭೋಗವ ತ್ಯಜಿಸುತಲಿ ಭಾರತ ಮಾತೆಯ ಚರಣದ ಸೇವೆಗೆ ದಣಿಯದ ಶಕ್ತಿಯ ಗಳಿಸುತಲಿ || ಪ || ಅನುಪಮ ಕಾರ್ಯಕೆ ಅರ್ಪಿತ ಬದುಕಿನ ಜೀವನ ಮೌಲ್ಯವ ಬೆಳೆಸುತಲಿ ತರತಮ ಭಾವದ ಕತ್ತಲ ನೀಗಿ ಮಾನವ ಸ್ವರ್ಗವ ಸೃಜಿಸುತಲಿ || 1 || ದೇಹದ ಗುಡಿಯಲಿ ಧ್ಯೇಯವು ಬೆಳಗಲಿ ದ್ವೇಷ ಅಸೂಯೆಗೆ ಎಡೆಗೊಡದೆ ಕಾಯಕೆ ದೃಢತೆಯ ಚಿತ್ತಕೆ ಸ್ಫೂರ್ತಿಯ ತುಂಬುವ […]
ಎಲ್ಲಾ ಭೇದ ಮರೆತು ಬನ್ನಿರಿ ನಾವು ಸಮಾನ ಸಾರುವ ಇಂದು ಎಲ್ಲರು ಹಿಂದು ಇದುವೆ ನವಗಾನ || ಪ || ದುಡಿದರು ಕಾಣುತ ಕೇಶವರಂದು ಐಕ್ಯದ ಸುಂದರ ಕನಸು ಪಣತೊಡಿರಿಂದು ಮಾಡುವೆವೆಂದು ಎಲ್ಲವನೂ ನನಸು ಜಾತಿ ಮತಗಳ ಧನಿಕ ಬಡವರ ಭೇದವ ತರಬೇಡಿ ಬಿದ್ದವರನು ಮೇಲೆತ್ತುವ ಬನ್ನಿ ಎಲ್ಲರೂ ಕೈ ನೀಡಿ || 1 || ಗಂಗೆ ತುಂಗೆ ಕಾವೇರಿಯ ಜಲ ನಮಗಾಗಿಯೆ ಎಂದು ಮನ […]