ಮಾತೃಭೂಮಿಯ ಸೇವೆಗೈಯ್ಯುವ ಸರಳ ಸೂತ್ರದ ಹಂದರಪುಣ್ಯಭೂಮಿಯ ಸತತ ನೆನೆಯುವ ನಿತ್ಯಸಾಧನೆ ಸುಂದರ ॥ ಪ॥ ಭಾಷೆ ಭಿನ್ನತೆ ಹಿಂದೆ ಸರಿದಿದೆ ಹಿಂದು ಸತ್ವವೆ ಪ್ರೇರಣೆದ್ವೇಷ ಕಳೆಯುತ ಶಕ್ತವಾಗಿದೆ ಸಾಮರಸ್ಯದ ಭಾವನೆದೋಷವೆಲ್ಲವ ಸರಿಸಿ ದೂರಕೆ ನಿತ್ಯ ನಡೆದಿದೆ ಸಾಧನೆನಾಶವಾಗಿದೆ ಸ್ವಾರ್ಥಲಾಲಸೆ ಸ್ವಂತವೆಲ್ಲವು ಅರ್ಪಣೆ ॥ 1 ॥ ಧ್ಯೇಯಮಾರ್ಗದಿ ನಡೆಯು ನಮ್ಮದು ಕಾರ್ಯಪದ್ಧತಿ ಸಾತ್ವಿಕದೇಶಕಾಗಿಯೆ ದುಡಿವ ಕಾರ್ಯಕೆ ಭಗವೆ ಎಮ್ಮಯ ಪ್ರೇರಕಸಿದ್ಧಗೊಂಡಿದೆ ಕಾರ್ಯಭೂಮಿಕೆ ವ್ಯಕ್ತಿ ವ್ಯಕ್ತಿಯು ಸಾಧಕಶತಕದಂಚಿನ ಸಂಘಕಾರ್ಯವೆ ನಾಡಿನೇಳ್ಗೆಗೆ ಪೂರಕ ॥ 2 ॥ ದೇಶಕಾರ್ಯವೆ ಈಶಕಾರ್ಯವು […]
ಧ್ಯೇಯ ಸಾಧಕನ ದಾರಿ ಸರಳ ಸುಂದರ ಸರಿ ಬದುಕಿನಾ ಸಮಯವಾ ಸವೆದಿಹುದು ಇಲ್ಲಿ || ಪ || ಭಾರತದ ಹಿರಿಮೆಯ ಮರೆತಿರುವ ಸಮಾಜವ ಬಡಿದೆಬ್ಬಿಸುವಾ ಕಾರ್ಯ ಹಗಲಿರುಳು ನಡೆದಿದೆ || 1 || ಸಂಘಟನೆಯ ಮಂತ್ರದಿ ಶತಮಾನದ ಹೊಸ್ತಿಲಲಿ ದೇಶ ವ್ಯಾಪ್ತವಾಗುವ ಕಾರ್ಯ ನಡೆದಿದೆ ನಿತ್ಯ ನಿರುತದಿ || 2 || ತಾಳ್ಮೆಗೊಂದು ಮಿತಿಯಿರಲಿ ಢೋಂಗೀವಾದಿತನಕೆ ಸೆಡ್ಡು ಹೊಡೆಯುವ ದಿನಕೆ ಸಿದ್ಧವಾಗಿದೆ ಭೂಮಿಕೆ || 3 ||