ಉತ್ತರದುನ್ನತ ಹಿಮವತ್ಪರ್ವತ ದೆತ್ತರ ಬೆಳೆದಿಹ ಹೇ ಸಂತ ಸಂತಮಹಂತರ ಏಕತೆ ಸಾಧಿಸಿ ವಿಷಮತೆ ನೀಗಿದ ಧೀಮಂತ || ಪ || ಸಂತತ ಚಿಂತನ ಮಂಥನದಿಂದ ಉದಿಸಿತು ವಿಚಾರ ನವನೀತ ಸಂಘದ ಗಂಗೆಯ ಸುಂದರ ತಟದಲಿ ಸಮರಸತೆಯ ಸುರ ಸಂಗೀತ || 1 || ಬ್ರಹ್ಮಬಲದ ಜೊತೆ ಕ್ಷಾತ್ರ ಕಠೋರತೆ ಅನುದಿನ ಶಕ್ತಿಯ ಸಂಚಯನ ನಿರ್ಮೋಹತ್ವವು ನಿರಹಂಕಾರವು ಅಗಣಿತ ಗುಣಗಳ ಸಮ್ಮಿಲನ || 2 || ರಾಘವನಂದದಿ ಮಾರ್ಗವ ತೋರಿದೆ ಮೌಲ್ಯಾದರ್ಶಗಳಾಚರಿಸಿ ಮಾಧವ ತವ ಪದ ವಿರಚಿತ ಪಥದಲಿ […]
ಅಂತ್ಯವಿಲ್ಲದ ಸಂತ ನಿನ್ನಯ ಚಿಂತನೆಯದು ಚಿರಂತನ ಅಖಿಲವಿಶ್ವದ ಸಕಲ ಮನುಕುಲ ನೀಡಿತದಕೆ ಸ್ಪಂದನ ನಿನ್ನಡಿಗೆ ಶತವಂದನ || ಪ || ವೇಷಭೂಷಣ ಸಡಿಲ ಸರಳ ಧ್ಯೇಯನಿಷ್ಠೆಯು ಮಾತ್ರ ಅಚಲ ತನ್ನ ಮೋಕ್ಷದ ವಾಂಛೆ ತ್ಯಜಿಸಿ ಗೈದ ಕಾರ್ಯ ಅಗಾಧ ಅತುಲ || 1 || ಭರತಭೂಮಿಯ ಅಗಲ ಉದ್ದಕು ಚಲಿಸಿದ ಪರಿವ್ರಾಜಕ ಸಾಧಕರ ಸಂತತಿಯ ಬೆಳೆಸಿದ ಸಂತ ಜನರಧಿನಾಯಕ || 2 || ಯತಿಯೆ ನಿನ್ನಯ ಸ್ಮೃತಿಯು ನಮಗೆ ರಾಷ್ಟ್ರಕಾರ್ಯಕೆ ಪ್ರೇರಣೆ ನೀನು ತೋರಿದ ಪಥದಿ ಚಲಿಸಿ […]
ಸಾಟಿ ಇಲ್ಲದ ಸಂತ ನಿನಗೆ ಕೋಟಿ ಕೋಟಿ ವಂದನೆ ಹುಟ್ಟಿ ಬಾರೊ ಮತ್ತೆ ನೀನು ಸಕಲ ವಿಶ್ವವಂದ್ಯನೆ ನೋವ ಸಹಿಸಲಾರೆವು… ನಿನ್ನ ಮರೆಯಲಾರೆವು || ಅ.ಪ || ಪ್ರಾಂತಜಾತಿ ಪಂಥ ಪಕ್ಷ ಸೀಮೆಗಳನು ದಾಟಿದೆ ಭಾರತೀಯರೆದೆಯ ಹೃದಯ ತಂತಿಗಳನು ಮೀಟಿದೆ ಸಂಕುಚಿತತೆ ಮೀರಿ ನಿಂತ ತ್ಯಾಗಭರಿತ ಜೀವನ ಕಾರ್ಯನಿರತ ಸ್ಫೂರ್ತಿಭರಿತ ನಿನ್ನ ಬದುಕು ಪಾವನ || 1 || ರಾಜಕೀಯ ನೆಪಕೆ […]
ಕರ್ಮಯೋಗಿ ಧೀಮಂತ ಸಂತ ನಿನ್ನ ನೆನಪಿಗೆ ಅನಂತದಲ್ಲಿ ಲೀನವಾದ ನಿನ್ನ ಬಾಳಜ್ಯೋತಿಗೆ ಅಶ್ರುಪೂರ್ಣ ತರ್ಪಣ ಭಾವಸುಮಗಳರ್ಪಣ ತರುಣ ಹೃದಯ ಸ್ಪಂದನ ಕೋಟಿಕೋಟಿ ವಂದನಾ || ಪ || ಸ್ವಾರ್ಥವನ್ನು ಮೆಟ್ಟಿ ನೀ ಧ್ಯೇಯಪಥದಿ ಸಾಗಿದೆ ಸಾರ್ಥಕತೆಯ ಗುರಿಯೆಡೆ ಕೀರ್ತಿಯನ್ನು ಬಯಸದೆ ಪದವಿ ಪದಕವೆಲ್ಲವ ಮಾತೆಯಡಿಗೆ ಚೆಲ್ಲಿದೆ ನಾಡಿಗಾಗಿ ಶ್ರಮಿಸಿದೆ ಕ್ಷಣವಿರಾಮವಿಲ್ಲದೆ || 1 || ಗಟ್ಟಿನೆಲದಿ ಸೇವೆಯ ಪುಟ್ಟಸಸಿಯ ನೆಟ್ಟಿಹೆ ಬೆವರು ರಕ್ತ ಹರಿಸುತಾ ದಿಟ್ಟತನದಿ ಬೆಳೆಸಿದೆ ವರುಷ ಹತ್ತು ಉರುಳಿದೆ ಸುಮನರಾಶಿ ಅರಳಿದೆ ಕಂಪು ಸೂಸುತಿರಲು […]