ಮಾಘ ಮಾಸದ ಚಳಿಯದು ಮಾಗುತ ಬರುತಿದೆ ಸಂಕ್ರಮಣ ಉತ್ತರದೆಡೆಗೆ ಅರುಣನ ಪಯಣ ಕಿರಣದ ಸಂಚಲನ ಇರುಳನು ಸರಿಸುತ ಬೆಳಕನು ಹರಿಸುತ ಜ್ಞಾನದ ಅನುರಣನ ವ್ಯಕ್ತಿ ವ್ಯಕ್ತಿಯೊಳು ಮೊಳಗಿದೆ ಗಾನ ಹಿಂದೂ ಜಾಗರಣ || ಪ || ಬೆಲ್ಲದ ಸಿಹಿಯೊಳು ಎಳ್ಳಿನ ಜಿಡ್ಡೊಳು ಅಡಗಿದೆ ಗೆಲ್ಲುವ ಜಿದ್ದು ಜ್ಯೋತಿರ್ವರ್ಷದ ವೇಗದಿ ಹರಡಿದೆ ರಾಷ್ಟ್ರ ಭಕ್ತಿಯ ಸದ್ದು ಧರ್ಮದ ರಕ್ಷೆಯೆ ರಾಷ್ಟ್ರ ರಕ್ಷೆಯು ಬಾ ಹಿಂದುವೆ ಸಿಡಿದೆದ್ದು ಶತ್ರುವಿನೆದೆಯನು ಸೀಳುವ ಛಲವಿರೆ ಭದ್ರವು ಸರಹದ್ದು || 1 || ತಾಯಿ […]
ಸತ್ಪಥ ದೃಢವ್ರತಗಳ ಪೋಷಣೆಗೆ ಜೀವನ ಬೆಳಗುವ ಪರಿವರ್ತನೆ ಸಕಾಲವೀ ಸಂಕ್ರಾಂತಿಯ ಘಳಿಗೆ || ಪ || ಚೇತನಹೀನತೆ ಆಶಾಶೂನ್ಯತೆ ಸೀಳಿ ಬೀಸಿದೆ ಶುಭಕ್ರಾಂತಿಯ ಸವಿಗಾಳಿ ರವಿಸಂಚಾರದಿ ಬೆಳೆಯುವ ಬೆಳಕಿನ ಹರಕೆ ಪಾವನವೀ ಸಂಕ್ರಾಂತಿಯ ದಿನಕೆ || 1 || ಕುಗ್ಗುವ ಅಜ್ಞಾನದ ತಿಮಿರದ ಹೆಗ್ಗಡಲು ಚದುರೋಡುವ ಕೆಡುಕಿನ ಕಾರ್ಮುಗಿಲು ಸಗ್ಗದ ಪಥ ಉತ್ತರಾಯನವು ತೆರೆದವೊಲು ಹಿರಿಹಿಗ್ಗಿದೆ ಸುಜ್ಞಾನದ ಹಗಲು || 2 || ಜಡತೆಯನಾಂತಿಹ ಸೃಷ್ಟಿಗೆ ದೃಷ್ಟಿಯ ನೀಡಿ ಯಶಪ್ರಾಪ್ತಿಗೆ ಹೊಸ ದಾರಿಯ ಮಾಡಿ ತಿಮಿರವಿನಾಶದ ಋಜುವಿಜಯದ […]
ವಿಜಯದಾಯಿ ಸಂಕ್ರಾಂತಿಯಿದು || ಪ || ನವ ರವಿ ಬೆಳಗು ಪಾವನ ಶುಭದಿನ ತೊಳೆಯುತ ತನುಕೃತಿ ವಾಙ್ಮತಿ ಹೃನ್ಮನ ದೋಷವ ಕಳೆಯುತ ನಿರ್ಮಲಗೊಳಿಸಿ ವ್ರತ ಕೈಗೊಳ್ಳುವ ಕಾಲವಿದು || 1 || ಗೌರವ ವೈಭವ ಕಲಿತನ ಧೀಧನ ಚಿರ ಸುಖ ತುಂಬಿದ ಇತಿಹಾಸದ ಘನ ಪುನರಪಿ ಪಡೆಯಲು ಮೇಲ್ಮೆಯಗಳಿಸಿ ಕದಲದೆ ಕಾದುವ ಕಾಲವಿದು || 2 || ಗುರಿ ಸಾಧಿಸುತಿಹ ವರವ್ರತಿಯೋಧನ ಕೊರಗಿದ ಆಶೆಯ ಪುನರುಜ್ಜೀವನ ನೂತನ ಸ್ಫೂರ್ತಿಯ ಧೈರ್ಯವ ಬೆಳೆಸಿ ದುಂದುಭಿ ಮೊಳಗಿಪ ಕಾಲವಿದು || […]