ಹೃದಯವನರಳಿಸಿ ಜಗವನೆ ಬೆಳಗುವ ಸಂಕಲ್ಪಗಳವತರಿಸುತಿವೆ ಸಂಕ್ರಮಣಕೆ ತಹತಹಿಸುತಿವೆ || ಪ || ಶೋಧಿಸಿ ಸೋಲಿನ ಮೂಲಗಳ ಭೇದಿಸಿ ನೂರು ಸವಾಲುಗಳ ಛೇದಿಸಿ ಛಲವ ಪ್ರಚೋದಿಸಿ ಬಲವ ಸಾಧಿಸಿ ತರುವೆವು ಜಯದೊಲವ || 1 || ಸಮರಸತೆಯ ಚಿರ ಸಂದೇಶ ಬಾಳಿದ ಹಿರಿಯರ ಆದರ್ಶ ಮರಳಲಿ ಧರೆಗೆ ಕಾಲದ ಕರೆಗೆ ಕರಗಲಿ ಭ್ರಮೆಯ ಕರಾಳ ಹೊಗೆ || 2 || ಪುಟಿದೇಳಲಿ ನೆಲದಭಿಮಾನ ಪುಟಗೊಳ್ಳಲಿ ತಾರುಣ್ಯಧನ ರಕ್ತದ ಕಣಕಣ ಸುರಿಯೆ ಸಮರ್ಪಣ ಶಕ್ತಗೊಳಲಿ ಸುತ ಜಾಗರಣ || 3 […]