ಸಂಗೀತ ಸಾಮ್ರಾಜ್ಯದರಸುತನ ಕಿತ್ತೆಸೆದು ರಾಷ್ಟ್ರಸೇವೆಗೆ ನಿಂತ ಶ್ರೀ ಯಾದವ ಕೇಶವನ ಸಾನಿಧ್ಯ ಮಾಧವನ ಸಾಮೀಪ್ಯ ಸ್ವರ್ಣಮಂದಾರದಲಿ ಸುಮ ಸೌರಭ || ಪ || ಭಾರತಿಯ ಚರಣದಲಿ ಗಾಯನದ ನೈವೇದ್ಯ ಕೀರ್ತಿಮೋಹವ ಮರೆತ ಬಾಳಪಯಣ ರಾಷ್ಟ್ರವೇ ಶ್ರುತಿಲಯವು ಜೀವನವೆ ಸಂಗೀತ ತ್ಯಾಗಮಯ ಸಂಸ್ಕೃತಿಯ ಭೃಂಗಗಾನ || 1 || ಪೂರ್ವಸೂರಿಗಳೆಲ್ಲ ಸಾರಿ ತೋರಿದ ದಾರಿ ಕೃತಿರೂಪವನು ಪಡೆದ ಸಂಘಕಾರ್ಯ ಸ್ಪರ್ಷಮಣಿ ಗುಣಪಡೆದ ಚುಂಬಕದ ಸೆಳೆತದಲಿ ಪ್ರತಿಮನದಿ ಟಿಸಿಲೊಡೆದ ಧ್ಯೇಯವಾದ || 2 || ಭಾಸ್ಕರನ ಬಿಸುಪಿನಲಿ ಚಂದ್ರಮನ ಶೀತಲತೆ […]
ಸರಿಗಮ ಸ್ವರಗಳ ಏರಿಳಿತ ಅದುವೇ ಸುಮಧುರ ಸಂಗೀತ ಸಮರಸತೆಯ ಸ್ಪಂದನ ಮಿಡಿತ ನಾಡಿನ ಐಕ್ಯದ ಸಂಕೇತ || ಪ || ಅಳಿಸಲೇಬೇಕು ನಾವಿಂದು ಮೇಲುಕೀಳುಗಳ ಅಂತರವ ರಚಿಸಲೇಬೇಕು ಸುಂದರ ಸದೃಢ ಭಾರತಮಾತೆಯ ಮಂದಿರವ || 1 || ಜಾತಿಮತಗಳ ಗೋಡೆಯ ಕೆಡವಿ ರಾಷ್ಟ್ರೀಯತೆಯು ಪ್ರವಹಿಸಲಿ ಹಿಂದುತ್ವದ ಶ್ರೀಗಂಧದ ಪರಿಮಳ ದಶದಿಶೆಗಳಿಗೂ ಪಸರಿಸಲಿ || 2 || ವಿಶ್ವಶಾಂತಿಯ ಗುರಿಸಾಧನೆಗೆ ವಿಶ್ವಾಸವೆ ಮೂಲಾಧಾರ ಭಾರತೀಯರೇ ನೀಡಲು ಬಲ್ಲೆವು ಯುಗಗಳ ಕನಸಿಗೆ ಆಕಾರ || 3 ||
ವರ ಭವ್ಯ ಭಾರತದ ನಿರ್ಭೀತ ಸಂತತಿಗೆ ಸಂಗ್ರಾಮ ಸಂಗೀತ ಹಾಡುವಾಸೆ ರಣಭೇರಿ ಕಹಳೆಗಳ ಘನ ಘೋರ ಗರ್ಜನೆಗೆ ನಲಿದು ನರ್ತಿಸು ಹೋರಾಡುವಾಸೆ || ಪ || ಮಾವನತೆಯುದ್ಧಾರ ಮಾತೃವೈಭವಕಾಗಿ ಬೆವರು ನೆತ್ತರ ಸುರಿಸಿ ದುಡಿಯುವಾಸೆ ದೇಶಹಿತ ಧರ್ಮಹಿತ ಸರ್ವಜಗಹಿತಕಾಗಿ ಕಲಿತನದಿ ಕಾದಾಡಿ ಮಡಿಯುವಾಸೆ || 1 || ಸವ್ಯಸಾಚಿಯ ತೆರದಿ ದಿವ್ಯಾಸ್ತ್ರಗಳ ಪಡೆದು ಮರಳಿ ಕುರುಕ್ಷೇತ್ರದೊಳು ನಿಲ್ಲುವಾಸೆ ಭೋರ್ಗರೆವ ಪಾಂಚಜನ್ಯದಾ ರಣಘೋಷವನು ಭೂಮಂಡಲದಿ ಬಿತ್ತರಿಸುವಾಸೆ || 2 || ಧ್ಯೇಯದೇವನ ಪದದಿ ಅರ್ಚನೆಯ ಹೂವಾಗಿ ಧನ್ಯತೆಯ ಸಂತೃಪ್ತಿ […]