ಸಂಘದಂಗಳದಲ್ಲಿ ನಡೆದಿದೆ ಧ್ಯೇಯ ಸಾಧನೆ ಅವಿರತ ಹಸಿವು ಕಾಣದು ತೃಷೆಯು ಕಾಡದು ಅಸುವು ರಾಷ್ಟ್ರ ಸಮರ್ಪಿತ || ಪ || ಕಸುವು ಕುಂದುವ ಮೊದಲೆ ಮೋಸದ ಮುಸುಕ ಸರಿಸುವ ಹಂಬಲ ವಸುಧೆಗೊದಗಿದ ನೋವ ನೀಗಲು ನಮಗೆ ದೇವರೆ ಬೆಂಬಲ || 1 || ಶುದ್ಧ ಸಾತ್ವಿಕ ತಪದ ಜತೆಗಿದೆ ಶಸ್ತ್ರ ಶಾಸ್ತ್ರ ಪ್ರಬುದ್ಧತೆ ಯುದ್ಧ ಸಿದ್ಧತೆ ಭರದಿ ನಡೆದಿದೆ ಬುದ್ಧವಚನಕು ಬದ್ಧತೆ || 2 || ಸದ್ದು ಗದ್ದಲವಿರದೆ ಸಭ್ಯತೆ ಹೃದಯ ಗದ್ದುಗೆ ಏರಿದೆ ವಿದ್ಯೆ ಬುದ್ಧಿಗೆ […]