ಭಾರತ ವರ್ಷದ ಭವ್ಯ ನವೋದಯ

ಭಾರತ ವರ್ಷದ ಭವ್ಯ ನವೋದಯ ಬಯಸಿದೆ ಶಕ್ತಿಯ ಸಂಗಮವ ದಾರಿಯ ತೋರಿದ ಧೀರ ಪರಂಪರೆ ಜಡತೆಯ ನೀಗಿದ ಜಂಗಮವ            || ಪ ||   ಶ್ರದ್ಧೆಯ ಬದಲಿಪ ಬುದ್ಧಿ ಭೇದಗಳ ಸದ್ದಿಲ್ಲದ ಹುನ್ನಾರವಿದೆ ಇದ್ದುದನೆಲ್ಲವ ಅಲ್ಲಗಳೆವ ಹಸಿ ಸಿದ್ಧಾಂತದ ಸಂಘರ್ಷವಿದೆ                || 1 ||   ಗಡಿಗಳ ಗುಡಿಗಳ ಒಡೆವಾಯುಧಗಳ ಮುರಿದಿಕ್ಕುವ ಛಲ ಮೂಡುತಿದೆ ಕಡಲಿನ ತಡಿ ಹಿಮಶಿಖರದ ನಡುವಿನ ಧರೆಯೊಡೆತನ ದೃಢವಾಗುತಿದೆ         || 2 ||   ಸಾವಿರ ಕೈಗಳು ಒಗ್ಗೂಡಿಹ ಬಲ ಭಾವೈಕ್ಯದ ನೆಲೆಯಾಗಲಿದೆ […]

Read More