ಬೆಳಗಲೀ ಬೆಳಗಲೀ ಸನಾತನಾರ್ಯಭಾರತ ಕಳೆಯಲೀ ಕಳೆಯಲೀ ಕವಿದ ಕತ್ತಲೆಯ ಮೆರೆತ || ಪ || ಬಾಳಿನಲ್ಲಿ ಬೆಳಕು ಕಂಡು ಬಾಳಿದವರ ಭಾರತ ತೋಳಿನಲ್ಲಿ ಕ್ಷಾತ್ರತೇಜ ತುಂಬಿದವರ ಭಾರತ ಕೇಳಿದವರ ಜ್ಞಾನತೃಷೆಗೆ ಅಮೃತವಿತ್ತ ಭಾರತ ಮೌಳಿಯಲ್ಲಿ ಚಂದ್ರಕಲೆಯನಾಂತ ಶಿವನ ಭಾರತ || 1 || ಬ್ರಹ್ಮಲೋಕದಿಂದ ಬಂದ ಗಂಗೆ ಹರಿದ ಭಾರತ ಬ್ರಹ್ಮಭಾವ ತುಂಬಿ ನಿಂತ ಸದ್ಗುರುಗಳ ಭಾರತ ಧರ್ಮದಿಂದ ರಾಜ್ಯವಾಳ್ದ ರಾಮ ಮೆರೆದ ಭಾರತ ಧರ್ಮವನ್ನು ಎತ್ತಿ ಹಿಡಿದ ಕೃಷ್ಣ ಬೆಳೆದ ಭಾರತ || 2 || […]