ಸುಂದರವು ನಮ್ಮೀ ಸನಾತನ

ಸುಂದರವು ನಮ್ಮೀ ಸನಾತನ ಹೆಮ್ಮೆ ಹಿಂದೂ ಪದ್ಧತಿ ಹಂದರವು ಬಂಧುಗಳು ತಮ್ಮಲಿ ಬೆಸೆವ ಸುಂದರ ಸಂಸ್ಕೃತಿ      || ಪ || ಜನನಿ ಜನ್ಮದಭೂಮಿ ನಮ್ಮಯ ನಾಕವೆಂದಿಹ ರಾಮನು ಮನನ ಮಾಡೆಲೊ ನಿಜಸ್ವರೂಪವನೆಂದು ಸಾರಿದ ಕೃಷ್ಣನು “ಕರ್ಮದಲಿ ನೀನಿಲ್ಲದರ ಫಲದಾಸೆ ತೊರೆ” ಯೆಂದಿಹ ಕರೆ ಧರ್ಮಮಾರ್ಗದಿ ಜೀವ ಪೊರೆದಳು ಭರತಭೂಮಿ ವಸುಂಧರೆ‌  || 1 || ಚಂದ್ರಗುಪ್ತನ ಶೌರ್ಯಕೆ ಚಾಣಕ್ಯ ಪಂಡಿತಬೋಧನೆ ಇಂದ್ರಸದೃಶ ಶಿವಾಜಿಗೈದರು ರಾಮದಾಸಾರಾಧನೆ ಮಂದ್ರಹಿಂದೂ ದನಿಯದೇರಿತು ತಾರಕಕೆ ಋಷಿತಪದಲಿ ವಂದೇಮಾತರಂ ಗೀತೆ ರಚಿಸಿದ […]

Read More

ಹಿಂದು ಹೆಸರಿನ ರಾಷ್ಟ್ರದೇಹದ ಉಸಿರೆ

ಹಿಂದು ಹೆಸರಿನ ರಾಷ್ಟ್ರದೇಹದ ಉಸಿರೆ ನಮನ ಸನಾತನ ಓ ಮಹೋನ್ನತ ಚೇತನ                                  || ಪ || ಹಿಂದುಸಾಗರ ಹಿಮದ ಆಗರ ನದಿಯ ನಾಗರ ಸಂಗಮ ಮರದ ಮರ್ಮರದಿಂದ ಹೊರಡಿಸು ಸ್ವಾಭಿಮಾನದ ಸರಿಗಮ ಹಿಂದು ಹಿಂದುವಿನೆದೆಯ ಸ್ಪಂದನ ನಿನ್ನ ಯಾನದ ಇಂಧನ      || 1 || ಭಣಗುಡುವ ಜನಮನದ ಗಗನದಿ ತುಂಬಿ ಮೇಘದ […]

Read More

ಸ್ಮೃತಿಸಚೇತಕ ಧ್ವಜ ನಮೋ

ಸ್ಮೃತಿಸಚೇತಕ ಧ್ವಜ ನಮೋ ವ್ರತಿ ಸನಾತನ ಹೇ ವಿಭೋ ಅಗ್ನಿವರ್ಣದ ಜ್ಞಾನಕಿರಣದ ಜೀವಭೃಂಗಾರವೆ ನಮೋ || ಪ || ವಿಂಧ್ಯ ಹಿಮನಗ ನಿನ್ನ ಧರಿಸಲಿ ವಿಶ್ವವಂದ್ಯತೆ ಗಳಿಸಲಿ ನದಿ ಸಮುದ್ರದಿ ರೂಪ ಬಿಂಬಿಸಿ ಜಲವ ಪಾವನಗೊಳಿಸಲಿ ಕೀರ್ತಿವಾರಿಯು ಸ್ಫೂರ್ತಿಧಾರೆಯು ತುಂಬಿದಂಬುಧಿರೂಪ ಓ ಸತ್ವ ಸಂಗೀತವೇ ನಮೋ || 1 || ತ್ಯಾಗ ಶೌರ್ಯದಮೋಘ ಸಂಗಮ ನಾಡ ಸ್ಫೂರ್ತಿವಿಹಂಗಮ ರಾಷ್ಟ್ರದಕ್ಷಯ ಬಾಳ ಲಕ್ಷ್ಯದ ಭವ್ಯ ಸಾಕ್ಷಿ ಸಮಕ್ಷಮ ಧ್ಯೇಯದಾರಾಧನೆಯು ವೇದ್ಯವು ಹೃದಯಭೇರಿಯೆ ವಾದ್ಯವು ಜೀವನವೆ ನೈವೇದ್ಯವು || 2 […]

Read More