ಭರತವೀರ ಬಾಲರೇ ವೈರಿ ಘನ ಸಮೀರರೆ

ಭರತ ವೀರ ಬಾಲರೇ ವೈರಿ ಘನ ಸಮೀರರೆ ಏಳಿರೇಳಿರೇಳಿರೈ ಭರತಕೀರ್ತಿ ರನ್ನರೇ || ಪ || ಹರಪ್ರಿಯಾ ಕುಮಾರರೆ ಸುರಚಮೂಪ ಧೀರರೆ ಸುರಸುಜನ ಸುರಕ್ಷಸ್ಕಂದ ತಾರಕಾಂಧ ಸೂರ್ಯರೆ || 1 || ಸದಭಿಮಾನ ಶೂರರೆ ಸದಭಿಮನ್ಯು ವೀರರೆ ಗೆಲುವ ಪಣದಿ ಜೀವವಿಡುವ ಕುರುಚಮೂ ಕೃತಾಂತರೆ || 2 || ಗುರುಗೋವಿಂದ ಪುತ್ರರೆ ಪರಮತ್ಯಾಗ ಜೀವರೆ ಹುಗಿದ ಗೋಡೆಯೊಳಗೆ ನಿಂತ ಧರಮ ಕಾಪಿನಮರರೆ || 3 || ರಾಷ್ಟ್ರಹಿತಕೆ ದುಡಿಯಿರೋ ಅಸ್ತ್ರಶಸ್ತ್ರವೆತ್ತಿರೊ ಶತೃವಾರೆ ಬರಲಿ ಕರೆದು ಶಸ್ತ್ರದೂಟ ಬಡಿಸಿರೊ […]

Read More